ನಲಪಾಡ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹಲ್ಲೆಯೇ ನಡೆದಿಲ್ಲ? ಸುಳ್ಳು ಕೇಸ್ ದಾಖಲು?

First Published 26, Feb 2018, 4:02 PM IST
Nalapad case big twist
Highlights

ನಲಪಾಡ್ ಹ್ಯಾರೀಸ್ ಪ್ರಕರಣವನ್ನೇ ತಿರುಚಲಾಗಿದೆ. ನಲಪಾಡ್ ವಿರುದ್ಧ ದಾಖಲಾಗಿರುವ ಕೇಸ್ ಸುಳ್ಳು.  ಇದೊಂದು ರಾಜಕೀಯ ಪ್ರೇರಿತ ಪ್ರಕರಣ. 48 ಗಂಟೆಗಳ ನಂತರ 307 ಸೆಕ್ಷನ್ ಸೇರಿಸಲಾಗಿದೆ. ಉದ್ದೇಶಪೂರ್ವಕವಾಗಿ 307 ಸೆಕ್ಷನ್​ ಹಾಕಲಾಗಿದೆ ಎಂದು ನಲಪಾಡ್ ಪರ ವಕೀಲ ಟಾಮಿ ಸೆಬಾಸ್ಟಿಯನ್​ ವಾದ ಮಂಡಿಸಿದ್ದಾರೆ. 

ಬೆಂಗಳೂರು (ಫೆ. 26): ನಲಪಾಡ್ ಹ್ಯಾರೀಸ್ ಪ್ರಕರಣವನ್ನೇ ತಿರುಚಲಾಗಿದೆ. ನಲಪಾಡ್ ವಿರುದ್ಧ ದಾಖಲಾಗಿರುವ ಕೇಸ್ ಸುಳ್ಳು.  ಇದೊಂದು ರಾಜಕೀಯ ಪ್ರೇರಿತ ಪ್ರಕರಣ. 48 ಗಂಟೆಗಳ ನಂತರ 307 ಸೆಕ್ಷನ್ ಸೇರಿಸಲಾಗಿದೆ. ಉದ್ದೇಶಪೂರ್ವಕವಾಗಿ 307 ಸೆಕ್ಷನ್​ ಹಾಕಲಾಗಿದೆ ಎಂದು ನಲಪಾಡ್ ಪರ ವಕೀಲ ಟಾಮಿ ಸೆಬಾಸ್ಟಿಯನ್​ ವಾದ ಮಂಡಿಸಿದ್ದಾರೆ. 

ನಮ್ಮ ಕಕ್ಷಿದಾರರಿಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ. ವಿದ್ವತ್ ಮತ್ತು ನಲಪಾಡ್ ಪರಸ್ಪರ ಪರಿಚಯ ಇರಲಿಲ್ಲ.   ವೈದ್ಯಕೀಯವಾಗಿ ವಿದ್ವತ್ ಚೇತರಿಸಿಕೊಳ್ಳುತ್ತಿದ್ದಾನೆ. ವಿದ್ವತ್ ಈಗಾಗ್ಲೇ ಶೇ 90% ರಷ್ಟು ಚೇತರಿಸಿಕೊಂಡಿದ್ದಾನೆ.  ಈಗಾಗಲೇ ವಿದ್ವತ್​ನನ್ನು ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ.  ಇನ್ನೂ ಗಂಭೀರವಾಗಿ ಇದ್ದಾನೆ ಎಂಬ ಅಂಶವನ್ನು ಆಕ್ಷೇಪಣೆಯಲ್ಲಿ ಸಲ್ಲಿಸಿದ್ದಾರೆ.  ಆದರೆ ಅಭಿಯೋಜಕರು, ಆಕ್ಷೇಪಣೆಯಲ್ಲಿ ಈ ವಿಚಾರವನ್ನೇ ತಿಳಿಸಿಲ್ಲ ಹೇಳಿಕೆ ಪಡೆಯಲು ತನಿಖಾಧಿಕಾರಿ ಪ್ರಯತ್ನ ಪಟ್ಟಿದ್ದನ್ನೂ ಉಲ್ಲೇಖಿಸಿಲ್ಲ.  ಸತ್ಯಾಂಶ ಹೊರಬರಬೇಕಾದ್ರೆ ಪೂರ್ಣ ಪ್ರಮಾಣದ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ.  

ತಡರಾತ್ರಿ ಊಟಕ್ಕೆಂದು ಫರ್ಜಿ ಕೆಫೆಗೆ ತೆರಳಿದ್ದರು.  ಹಲ್ಲೆಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ಬಳಸಲಾಗಿಲ್ಲ. ಎರಡೂ ಕಡೆಯವರ ಮಧ್ಯೆ ಮಾತಿನ ಚಕಮಕಿಯಾಗಿದೆ. ಬಿಯರ್, ನೀರಿನ ಬಾಟಲ್​, ಐಸ್ ಜಗ್​ ಬಳಸಿ ಹಲ್ಲೆ ಮಾಡಲಾಗಿದೆ.  ಐಸ್​ ಜಗ್ ಒಂದನ್ನು ವಶಕ್ಕೆಪಡೆಯಲಾಗಿದೆ. ಜಗಳದ ವೇಳೆ ವಿದ್ವತ್ ಕೆಳಗೆ ಬಿದ್ದಿದ್ದಾನೆ. ಮಹಜರ್​ನಲ್ಲಿ ಬಾಟಲ್​ ಚೂರು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.  

loader