ಇಳಯರಾಜಾ ಅವರ ಪತ್ನಿ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಚೆನ್ನೈ(ಮೇ 31): ಇನ್ಫೋಸಿಸ್ ಸಂಸ್ಥೆಯ ಕ್ಯಾಂಪಸ್'ನಲ್ಲಿ ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ. ಮಹೀಂದ್ರಾ ವರ್ಲ್ಡ್ ಸಿಟಿ ಕ್ಯಾಂಪಸ್'ನಲ್ಲಿರುವ ಇನ್ಫೋಸಿಸ್'ನ ಕಚೇರಿಯಲ್ಲಿ 32 ವರ್ಷದ ಇಳಯರಾಜ ಅರುಣಾಚಲಂ ಅವರ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ. ಚೆನ್ನೈ ಹೊರವಲಯದ ತಿಂಡಿವನಂ ನಿವಾಸಿಯಾದ ಇಳಯರಾಜಾ ಅವರು ಸೋಮವಾರ ರಾತ್ರಿ ಇನ್ಫೋಸಿಸ್ ಕಚೇರಿಯೊಳಗಿರುವ ರೆಸ್ಟ್'ರೂಮ್'ನಲ್ಲಿ 10:45ರ ವೇಳೆಯಲ್ಲಿ ಮೃತಪಟ್ಟಿರುವ ಶಂಕೆ ಇದೆ. ಆದರೆ, ಯಾವುದೇ ಸ್ಯೂಸೈಡ್ ನೋಟ್ ಸಿಕ್ಕಿಲ್ಲ.

ಇಳಯರಾಜಾ ಅವರ ಪತ್ನಿ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮರಣೋತ್ತರ ಪರೀಕ್ಷೆಯ ವರದಿಯ ನಿರೀಕ್ಷೆಯಲ್ಲಿದ್ದಾರೆ.