Asianet Suvarna News Asianet Suvarna News

ಜೋರ್ಡಾನ್'ನಲ್ಲಿ ಇಸ್ಲಾಂ ನಿಂದಕ ಕಾರ್ಟೂನ್ ಶೇರ್ ಮಾಡಿದ್ದಕ್ಕೆ ಕೋರ್ಟ್ ಎದುರಲ್ಲೇ ಸಾಹಿತಿಯ ಹತ್ಯೆ

nahed hattar charged over offensive cartoon shot dead

ಜೋರ್ಡಾನ್(ಸೆ. 25): ಧರ್ಮನಿಂದನೆಯ ಪ್ರಕರಣದಲ್ಲಿ ಕೋರ್ಟ್ ವಿಚಾರಣೆ ಎದುರಿಸುತ್ತಿರುವ ಸಾಹಿತಿ ನಾಹೆದ್ ಹಟ್ಟರ್ ಅವರನ್ನು ನ್ಯಾಯಾಲಯದ ಎದುರೇ ಗುಂಡಿಟ್ಟು ಹತ್ಯೆಗೈದ ಘಟನೆ ನಡೆದಿದೆ. ಜೋರ್ಡಾನ್ ದೇಶದ ರಾಜಧಾನಿ ಆಮ್ಮನ್'ನ ಪ್ಯಾಲೇಸ್ ಆಫ್ ಜಸ್ಟೀಸ್ ಕೋರ್ಟ್'ನ ಆವರಣದಲ್ಲಿ ಬಂದೂಕುಧಾರಿಯೊಬ್ಬ ಹಟ್ಟರ್ ಮೇಲೆ ಮೂರು ಗುಂಡುಗಳನ್ನು ಹಾರಿಸಿ ಹತ್ಯಗೈದಿದ್ದಾನೆ. ಪೊಲೀಸರು ಈ ಬಂದೂಕುಧಾರಿಯನ್ನು ಬಂಧಿಸಿದ್ದಾರೆ. 55 ವರ್ಷದ ಆಸುಪಾಸಿನ ವಯಸ್ಸಿನ ಬಂಧೂಕುಧಾರಿಯು ಸಂಪ್ರದಾಯಸ್ಥ ಸುನ್ನಿ ಸಲಾಫಿಯ ತೊಡುಗೆ ತೊಟ್ಟುಕೊಂಡು ಈ ಕೃತ್ಯ ಎಸಗಿದ್ದಾನೆ. ಹತ್ಯೆಯಾದ ನಾಹೆದ್ ಹಟ್ಟರ್ ಅವರು ಕ್ರೈಸ್ತ ಧರ್ಮೀರಾಗಿದ್ದು, ಕಳೆದ ತಿಂಗಳು ಇಸ್ಲಾಮ್ ನಿಂದಕ ಕಾರ್ಟೂನ್ ಚಿತ್ರವನ್ನು ಸೋಷಿಯಲ್ ಮೀಡಿಯಾಗೆ ಶೇರ್ ಮಾಡಿ ವ್ಯಾಪಕ ಟೀಕೆಗೆ ತುತ್ತಾಗಿದ್ದರು. ಕಳೆದ ತಿಂಗಳೇ ಅವರನ್ನು ಪೊಲೀಸರು ಬಂಧಿಸಿದ್ದರು.

ಕಾರ್ಟೂನ್'ನಲ್ಲೇನಿತ್ತು..?
ಗಡ್ಡದಾರಿ ವ್ಯಕ್ತಿಯೊಬ್ಬ ಸ್ವರ್ಗದಲ್ಲಿ ಹಾಸಿಗೆ ಮೇಲೆ ನಾರಿಯರೊಂದಿಗೆ ಧೂಮಪಾನ ಮಾಡುತ್ತಾ ಮಲಗಿರುತ್ತಾನೆ. ವೈನ್ ಮತ್ತು ಡ್ರೈಫ್ರೂಟ್'ಗಳನ್ನು ತಂದುಕೊಡುವಂತೆ ದೇವರಿಗೇ ಆಜ್ಞಾಪಿಸುತ್ತಿರುವಂತೆ ಕಾರ್ಟೂನ್'ನಲ್ಲಿ ಬಿಂಬಿಸಲಾಗಿತ್ತು. ಈ ಕಾರ್ಟೂನನ್ನು ನಾಹೆದ್ ಹಟ್ಟರ್ ತಮ್ಮ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದು. ಇದು ಜೋರ್ಡಾನ್ ದೇಶದ ಸಂಪ್ರದಾಯಸ್ಥರ ಕೆಂಗಣ್ಣಿಗೆ ಕಾರಣವಾಗಿತ್ತು. ಈ ಇಸ್ಲಾಂ ನಿಂದಕ ಚಿತ್ರವನ್ನು ಶೇರ್ ಮಾಡಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿತ್ತು. ಆದರೆ, ಹಟ್ಟರ್ ಹೇಳುವ ಪ್ರಕಾರ ಇದು ದೈವವನ್ನು ನಿಂದಿಸುವುದಾಗಲೀ, ಅಥವಾ ಇಸ್ಲಾಮನ್ನು ಅಣಕುಸುವುದಾಗಲೀ ಮಾಡಿದ್ದಲ್ಲ. ಬದಲಾಗಿ, ಸುನ್ನಿ ಮೂಲಭೂತವಾದಿಗಳ ದೈವ ಹಾಗೂ ಸ್ವರ್ಗ ಕಲ್ಪನೆಯನ್ನು ಬಟಾಬಯಲು ಮಾಡುವುದು ಈ ಕಾರ್ಟೂನ್'ನ ಉದ್ದೇಶವಾಗಿತ್ತು ಎಂದು ಹೇಳಿದ್ದರು.

Follow Us:
Download App:
  • android
  • ios