ದೇಶದಲ್ಲಿ ಸರಣಿ ರೈಲು ಅವಘಡಗಳು ಮುಂದುವರಿದಿದ್ದು, ಇಂದು ಬೆಳಗ್ಗೆ ಮಹಾರಾಷ್ಟ್ರದಲ್ಲಿ ರೈಲು ಹಳಿ ತಪ್ಪಿದೆ. ಮುಂಬೈ - ನಾಗ್ಪುರ್‌ ದುರಂತೋ ಎಕ್ಸ್'ಪ್ರೆಸ್‌ ರೈಲು ಹಳಿ ತಪ್ಪಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ಮಹಾರಾಷ್ಟ್ರ(ಆ.29): ದೇಶದಲ್ಲಿ ಸರಣಿ ರೈಲು ಅವಘಡಗಳು ಮುಂದುವರಿದಿದ್ದು, ಇಂದು ಬೆಳಗ್ಗೆ ಮಹಾರಾಷ್ಟ್ರದಲ್ಲಿ ರೈಲು ಹಳಿ ತಪ್ಪಿದೆ. ಮುಂಬೈ - ನಾಗ್ಪುರ್‌ ದುರಂತೋ ಎಕ್ಸ್'ಪ್ರೆಸ್‌ ರೈಲು ಹಳಿ ತಪ್ಪಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.

ಕಳೆದ 10 ದಿನಗಳಲ್ಲಿ ಇದು 4ನೇ ರೈಲು ಅವಘಡವಾಗಿದೆ. ಬೆಳಿಗ್ಗೆ 6.30ರ ಸುಮಾರಿಗೆ ಕಲ್ಯಾಣ್‌ ಸಮೀಪ ಈ ಘಟನೆ ನಡೆದಿದ್ದು, ರೈಲಿನ 5 ಎಸಿ ಬೋಗಿಗಳು ಹಳಿ ತಪ್ಪಿದೆ. ರಕ್ಷಣಾ ಕಾರ್ಯ ಸಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿರುವುದು ವರದಿಯಾಗಿಲ್ಲ.

ದುರಂತೋ ರೈಲು ಹಳಿ ತಪ್ಪಿದ್ದರಿಂದ ನಾಗ್ಪುರ್‌ - ಮುಂಬೈ ಮಾರ್ಗಕ್ಕೆ ತೆರಳುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಈ ರೈಲು ಬೆಳಗ್ಗೆ 7.55ಕ್ಕೆ ಮುಂಬೈ ತಲುಪಬೇಕಿತ್ತು. ಮಹಾರಾಷ್ಟ್ರದಲ್ಲಿ ಒಂದು ವಾರದ ಅವಧಿಯಲ್ಲಿ ನಡೆದ ಎರಡನೇ ರೈಲು ಅವಘಡ ಇದಾಗಿದೆ.

ಇದೇ 25ರಂದು ಮಹಿಮಾ ಬಳಿ ಅಂಧೇರಿ ಮತ್ತು ಛತ್ರಪತಿ ಶಿವಾಜಿ ಟರ್ಮಿನಲ್ ನಡುವಿನ ಲೋಕಲ್ ಟ್ರೈನ್‌ನ ನಾಲ್ಕು ಬೋಗಿಗಳು ಹಳಿ ತಪ್ಪಿದ್ದವು.