ಮುಂಬೈ[ಜೂ.27]: ಮಹಾರಾಷ್ಟ್ರದ ಎನ್‌ಸಿಪಿ ಶಾಸಕ ಪ್ರಕಾಶ್‌ ಬುಧವಾರ ರಾಜ್ಯ ವಿಧಾನಸಭೆಗೆ, ಮುಂಬೈ ದಾಳಿ ವೇಳೆ ಹತರಾದ ಎಟಿಎಸ್‌ ಮುಖ್ಯಸ್ಥ ಹೇಮಂತ್‌ ಕರ್ಕರೆ ರೀತಿಯಲ್ಲಿ ವಸ್ತ್ರ ಧರಿಸಿಕೊಂಡು ಆಗಮಿಸುವ ಮೂಲಕ ಗಮನ ಸೆಳೆದರು.

ಮಾಲೇಗಾಂವ್‌ ಸ್ಫೋಟ ಪ್ರಕರಣದಲ್ಲಿ ಕರ್ಕರೆ ನನಗೆ ಜೈಲಿನಲ್ಲಿ ವಿನಾಕಾರಣ ಹಿಂಸಿದಿದ್ದರು. ಹೀಗಾಗಿಯೇ ನನ್ನ ಶಾಪದಿಂದಾಗಿ ಅವರು ಮುಂಬೈ ದಾಳಿ ವೇಳೆ ಸಾವನ್ನಪ್ಪಿದ್ದರು ಎಂದು ಇತ್ತೀಚೆಗಷ್ಟೇ ಬಿಜೆಪಿ ನಾಯಕ ಸಾಧ್ವಿ ಪ್ರಜ್ಞಾಸಿಂಗ್‌ ಠಾಕೂರ್‌ ಹೇಳಿದ್ದರು.

ಸಾಧ್ವಿ ಹೇಳಿಕೆಯನ್ನು ವಿರೋಧಿಸುವ ನಿಟ್ಟಿನಲ್ಲಿ ಪ್ರಕಾಶ್‌ ಈ ರೀತಿಯಲ್ಲಿ ವಸ್ತ್ರ ಧರಿಸಿ ಬಂದಿದ್ದರು.