ನಾಗ್ಪುರ [ಜು.15] : ಆಕೆ 19 ವರ್ಷದ ಸುಂದರಿ. ಮಾಡೆಲ್ ಆಗಬೇಕೆನ್ನುವುದು ಆಕೆಯ ಬಯಕೆ. ಆದರೆ ಆಕೆಯ ಪ್ರಿಯತಮನಿಗಿದ್ದ ಅನುಮಾನ ಆಕೆಯ ಪ್ರಾಣವನ್ನೇ ಬಲಿ ಪಡೆಯಿತು. 

ಖುಷಿ ಪರಿಹಾರ್ ಎನ್ನುವಾಕೆ ನಾಗ್ಪುರ ನಿವಾಸಿ.  ಅಶ್ರಫ್ ಶೇಖ್ ಎನ್ನುವಾತ ಆಕೆಯ ಹಿಂದೆ ಬಿದ್ದು ಪ್ರೀತಿ ಮಾಡಿದ್ದ. ಆದರೆ ಆಕೆಗೆ ಅನೈತಿಕ ಸಂಬಂಧ ಇದೆ ಎನ್ನುವ ಶಂಕೆ ಮೇಲೆ ಮುಖವನ್ನು ಜಜ್ಜಿ ಕೊಲೆ ಮಾಡಿದ. ಪಂಡುರ್ನಾ - ನಾಗ್ಪುರ ಹೆದ್ದಾರಿಯಲ್ಲಿ ಆಕೆಯ ಶವ ಪತ್ತೆಯಾಗಿದ್ದು,  ಸಾಮಾಜಿಕ ಜಾಲತಾಣದ ಮೂಲಕ ಆರೋಪಿಯನ್ನು ಪತ್ತೆ ಮಾಡುವಲ್ಲಿ  ಪೊಲೀಸರು ಯಶಸ್ವಿಯಾಗಿದ್ದಾರೆ. 

ಪರಿಹಾರ್ ಮಾಡೆಲ್ ಆಗುವ ಕನಸು ಹೊಂದಿದ್ದು, ಸ್ಥಳೀಯ ಫ್ಯಾಷನ್ ಶೋಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ಈ ವೇಳೆ ಹಲವರೊಂದಿಗೆ ಆಕೆ ಆತ್ಮೀಯವಾಗಿ ಇರುತ್ತಿರುವುದನ್ನು ನೋಡಿದ್ದ ಅಶ್ರಫ್ ಆಕೆಯ ಮೇಲೆ ಶಂಕೆ ವ್ಯಕ್ತಪಡಿಸಲು ಆರಂಭಿಸಿ, ಕೊಲೆ ಮಾಡುವ ಕೆಟ್ಟ ನಿರ್ಧಾರ ಮಾಡಿ ಗೆಳತಿಯ ಪ್ರಾಣವನ್ನೇ ತೆಗೆದ. 

ಸದ್ಯ ನಾಗ್ಪುರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಆತ ಪ್ರಿಯತಮೆ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.  ಜುಲೈ 12 ರಂದು ಇಬ್ಬರೂ ಕಾರಿನಲ್ಲಿ ಪ್ರಯಾಣಿಸಿದ್ದು,  ಸ್ವಲ್ಪ ದೂರ ತೆರಳಿದ ಮೇಲೆ ಕಲ್ಲಿನಿಂದ ಜಜ್ಜಿ ಆಕೆಯನ್ನು ಕೊಲೆಗೈದಿದ್ದಾಗಿ ಹೇಳಿದ್ದಾನೆ.  ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.