ಮಾಜಿ ಶಾಸಕ ನಾಗಪ್ಪ ಸಾಲೋಣಿ ಬಿಜೆಪಿಗೆ

First Published 4, Apr 2018, 8:36 AM IST
Nagappa Saloni Join BJP
Highlights

ಕಾಂಗ್ರೆಸ್‌ ಮಾಜಿ ಶಾಸಕ, ಕುರುಬ ಸಮಾಜದ ಪ್ರಭಾವಿ ನಾಯಕ ನಾಗಪ್ಪ ಸಾಲೋಣಿ ಅವರು ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಪಾರ ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಕೊಪ್ಪಳ: ಕಾಂಗ್ರೆಸ್‌ ಮಾಜಿ ಶಾಸಕ, ಕುರುಬ ಸಮಾಜದ ಪ್ರಭಾವಿ ನಾಯಕ ನಾಗಪ್ಪ ಸಾಲೋಣಿ ಅವರು ಬುಧವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಪಾರ ಬೆಂಬಲಿಗರೊಂದಿಗೆ ಬೆಂಗಳೂರಿನಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಕಳೆದ ಚುನಾವಣೆಯಲ್ಲಿ ಶಾಸಕ ಶಿವರಾಜ ತಂಗಡಗಿ ಗೆಲುವಿಗೆ ಟೊಂಕಕಟ್ಟಿನಿಂತಿದ್ದ ನಾಗಪ್ಪ ಸಾಲೋಣಿ ಅವರು, ಕಮಲ ಪಾಳಯಕ್ಕೆ ಆಗಮಿಸುತ್ತಿರುವುದು ಪಕ್ಷಕ್ಕೆ ಹೊಸ ಬಲ ನೀಡಿದೆ. ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತ, ಗುಂಪುಗಾರಿಕೆ ಹಾಗೂ ಹಲವಾರು ಅನಾವಶ್ಯಕ ಬೆಳವಣಿಗಳಿಂದ ಬೇಸತ್ತು ಯಾವುದೇ ಷರತ್ತುಗಳಿಲ್ಲದೆ, ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ.

ಸಂಗಣ್ಣ ಕರಡಿ ಅವರ ನಾಯಕತ್ವದಲ್ಲಿ ವಿಶ್ವಾಸ ಇಟ್ಟು ಸಾಲೋಣಿ ನಾಗಪ್ಪ ಅವರು ಬಿಜೆಪಿ ಸೇರಲು ಮನಸ್ಸು ಮಾಡಿದ್ದಾರೆ ಎಂದು ಅವರ ಬೆಂಬಲಿಗರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loader