ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದ ನಡಹಳ್ಳಿ ಬಿಜೆಪಿಗೆ?

First Published 18, Mar 2018, 8:17 AM IST
Nadahalli Jaoin BJP
Highlights

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇದ್ದರೂ, ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಿಲ್ಲ ಎಂದು ಬಂಡಾಯವೆದ್ದು, ಕಾಂಗ್ರೆಸ್ಸಿನಿಂದ ಉಚ್ಚಾಟನೆಗೊಂಡಿದ್ದ ದೇವರ ಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಈಗ ಬಿಜೆಪಿ ಸೇರುವ ವದಂತಿ ಹಬ್ಬಿದೆ. ಆದರೆ ಬಿಜೆಪಿ ಸೇರ್ಪಡೆಯನ್ನು ನಡಹಳ್ಳಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ವಿಜಯಪುರ : ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವೇ ಇದ್ದರೂ, ಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸ್ಪಂದಿಸಿಲ್ಲ ಎಂದು ಬಂಡಾಯವೆದ್ದು, ಕಾಂಗ್ರೆಸ್ಸಿನಿಂದ ಉಚ್ಚಾಟನೆಗೊಂಡಿದ್ದ ದೇವರ ಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಈಗ ಬಿಜೆಪಿ ಸೇರುವ ವದಂತಿ ಹಬ್ಬಿದೆ. ಆದರೆ ಬಿಜೆಪಿ ಸೇರ್ಪಡೆಯನ್ನು ನಡಹಳ್ಳಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ದೇವರ ಹಿಪ್ಪರಗಿ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತವಾಗಿ ಅನುದಾನ ನೀಡದೇ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿ ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದ್ದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಬಳಿಕ ಜೆಡಿಎಸ್‌ ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮುದ್ದೇಬಿಹಾಳ ಕ್ಷೇತ್ರದಿಂದ ಅವರಿಗೆ ಟಿಕೆಟ್‌ ಕೂಡ ಘೋಷಣೆಯಾಘಿತ್ತು. ಆದರೆ ಈಗ ಅವರು ಬಿಜೆಪಿ ಸೇರ್ಪಡೆಗೆ ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಭೇಟಿಯಾಗಲು ನಡಹಳ್ಳಿ ಹುಬ್ಬಳ್ಳಿಗೆ ತೆರಳಿದ್ದಾರೆ ಎನ್ನುವ ವದಂತಿಗಳು ಹರಿದಾಡುತ್ತಿವೆ.

‘ನಾನು ಬಿಜೆಪಿ ಸೇರುವುದಾಗಿ ಎಲ್ಲಿಯೂ ಯಾರ ಮುಂದೆಯೂ ಹೇಳಿಲ್ಲ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಅವರನ್ನು ಭೇಟಿಯಾಗಲು ಹುಬ್ಬಳ್ಳಿಗೂ ತೆರಳಿಲ್ಲ. ರಾಜ್ಯಸಭೆ ಚುನಾವಣೆ ನಂತರ ನನ್ನ ರಾಜಕೀಯ ನಡೆ ಬಗ್ಗೆ ಸ್ಪಷ್ಟನಿಲುವು ಪ್ರಕಟಿಸಲಾಗುವುದು’ ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದ್ದಾರೆ.

ದೂರವಾಣಿ ಮೂಲಕ ಮಾತನಾಡಿದ ಅವರು, ‘ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವ ರದ್ದುಪಡಿಸಿದ ನಂತರ ತಾನು ಸ್ವತಂತ್ರ ಶಾಸಕನಾಗಿದ್ದೇನೆ. ರಾಜ್ಯಸಭೆ ಚುನಾವಣೆ ಮುಗಿದ ಬಳಿಕ ತಾನು ಜೆಡಿಎಸ್‌ನಲ್ಲಿ ಇರಬೇಕೋ, ಬಿಜೆಪಿ ಸೇರಬೇಕೋ ಎಂಬುವುದರ ಬಗ್ಗೆ ಮುದ್ದೇಬಿಹಾಳ ಹಾಗೂ ದೇವರ ಹಿಪ್ಪರಗಿ ಕ್ಷೇತ್ರದ ತನ್ನ ಅಪಾರ ಬೆಂಬಲಿಗರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ತಾನು ಮುದ್ದೇಬಿಹಾಳ, ದೇವರಹಿಪ್ಪರಗಿ ಕ್ಷೇತ್ರಗಳೆಡರಲ್ಲಿಯೂ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗುವಷ್ಟುನನ್ನ ಬೆಂಬಲಿಗರು, ಕಾರ್ಯಕರ್ತರು ಇದ್ದಾರೆ’ ಎಂದು ತಿಳಿಸಿದರು.

ನಾನಂತೂ ಇದುವರೆಗೆ ಬಿಜೆಪಿ ಸೇರುವ ಬಗ್ಗೆ ಕಿಂಚಿತ್ತೂ ವಿಚಾರವನ್ನು ಮಾಡಿಲ್ಲ ಎಂದು ಅವರು ಬಿಜೆಪಿ ಸೇಪÜರ್‍ಡೆ ಬಗ್ಗೆ ಸಾರಾಸಗಟಾಗಿ ತಳ್ಳಿ ಹಾಕಿದರು.

ಹಿನ್ನೆಲೆ:

ಕಾಂಗ್ರೆಸ್‌ ಉಚ್ಚಾಟಿತ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರು ಎರಡು ಬಾರಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವನಿ ಎತ್ತುವ ಮೂಲಕ ಮುಖ್ಯಮಂತ್ರಿ ಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಟೀಕೆ ಮಾಡುವ ಮೂಲಕ ಕಾಂಗ್ರೆಸ್‌ ವಿರುದ್ಧ ತೊಡೆ ತಟ್ಟಿದರು.

2008ಲ್ಲಿ ದೇವರ ಹಿಪ್ಪರಗಿ ಕ್ಷೇತ್ರದಿಂದ ಆಯ್ಕೆಯಾದ ಎ.ಎಸ್‌.ಪಾಟೀಲ ನಡಹಳ್ಳಿ ಅವರು ಮೊಟ್ಟಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ನಂತರ 2013ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಎರಡನೆ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ತಮ್ಮ ಕ್ಷೇತ್ರದ ಜನರ ಬೇಕು ಬೇಡಗಳನ್ನು ಈಡೇರಿಸುವಲ್ಲಿ ಮುಖ್ಯಮಂತ್ರಿಗಳು ಸಂದಿಸುತ್ತಿಲ್ಲ ಎಂದು ಎ.ಎಸ್‌. ಪಾಟೀಲ ನಡಹಳ್ಳಿ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕುರಿತು ಹಿಗ್ಗಾ ಮುಗ್ಗಾ ಸರ್ಕಾರವನ್ನು ಟೀಕಿಸಿ ಕಾಂಗ್ರೆಸ್‌ ಪಕ್ಷಕ್ಕೆ ಮುಜಗುರವನ್ನುಂಟು ಮಾಡಿದರು. ಆಗ ಕಾಂಗ್ರೆಸ್‌ ಪಕ್ಷ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿತು. ತದನಂತರ ಕಳೆದ ಒಂದೂವರೆ ವಷÜರ್‍ದಿಂದ ಜೆಡಿಎಸ್‌ನಲ್ಲಿ ಗುರುತಿಸಿಕೊಂಡರು. ಆದರೆ ಅವರು ಜೆಡಿಎಸ್‌ನಲ್ಲಿ ಇನ್ನುವರೆಗೆ ಪ್ರಾಥಮಿಕ ಸದಸ್ಯತ್ವವನ್ನು ನಡಹಳ್ಳಿ ಹೊಂದಿಲ್ಲ.

ಮುದ್ದೇಬಿಹಾಳ ತಾಲೂಕಿನ ನಡಹಳ್ಳಿ ಅವರ ಸ್ವಗ್ರಾಮ. 1969ರ ಜ. 22ರಂದು ಜನಿಸಿದ ನಡಹಳ್ಳಿ ಅವರು ಎಂಎಸ್ಸಿ ಭೂಗರ್ಭ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ರೈತಪರ ಹೋರಾಟ, ಬಡವರಿಗೆ ಸಾಮೂಹಿಕ ವಿವಾಹ ಮಾಡುವುದು ಹಾಗೂ ಶಾಲಾ ಮಕ್ಕಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಣೆ ಮಾಡುವ ಮೂಲಕ ಜನಾನುರಾಗಿಯಾದರು.

loader