ಬೆಂಗಳೂರು (ಡಿ.13): ಮಾಡೆಲ್ ಆಗುವ ಕನಸು ಕಾಣುವ ಯುವತಿಯರೇ ಹುಷಾರ್ !  ಮಾಡೆಲಿಂಗ್‌ ಆಸೆ ತೋರಿಸಿ ಲಕ್ಷ ಲಕ್ಷ ವಂಚನೆ ಮಾಡ್ತಾರೆ ಎಚ್ಚರ!  

ಆನ್ ಲೈನ್ ನಲ್ಲಿ ಇಂತಹ ವಂಚನೆಗಳು ಹೆಚ್ಚಾಗುತ್ತಿವೆ. ಮೈಸೂರು ಮೂಲದ ಮಹಿಳೆಯೊಬ್ಬರು ಅದೇ ರೀತಿ ವಂಚನೆಗೊಳಗಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ಕೊರಿಯೋಗ್ರಾಫರ್ ಎಂದು ಪ್ರೊಫೈಲ್ ಹಾಕಿದ್ದ ಸತೀಶ್ ಎನ್ನುವ ವ್ಯಕ್ತಿ ಸುಂದರ ಯುವತಿಯರು, ಮಹಿಳೆಯರಿಗೆ ಫ್ರೆಂಡ್ಸ್​​ ರಿಕ್ವೆಸ್ಟ್ ಕಳುಹಿಸಿ ಅವರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ನಿಮ್ಮನ್ನು ಮಾಡೆಲ್ ಮಾಡ್ತೀನಿ ಎಂದು ಪುಸಲಾಯಿಸ್ತಿದ್ದ. ಸತೀಶ್ ಮಾತಿಗೆ ಮರುಳಾಗಿ ಮೈಸೂರಿನ ಮಹಿಳೆಯೊಬ್ಬರು ಮೋಸ ಹೋಗಿದ್ದಾರೆ.  ಮಹಿಳೆ ಪರಿಚಯ ಆಗುತ್ತಿದ್ದಂತೆ ಸೈಟ್ ಕೊಡಿಸುವುದಾಗಿ ನಂಬಿಸಿ 94 ಲಕ್ಷ ರೂ ವಂಚನೆ ಮಾಡಿದ್ದಾರೆ. 

ಹಣ ಪಡೆದುಕೊಂಡ ಬಳಿಕ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ.  ಒಂದಲ್ಲ ಎರಡಲ್ಲ, ಬರೋಬ್ಬರಿ 20ಕ್ಕೂ ಅಧಿಕ ಮಂದಿಗೆ ಪಂಗನಾಮ ಹಾಕಿದ್ದಾನೆ.  ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ವಾದಿರಾಜ್ ಎಂಬ ಹೆಸರಲ್ಲಿ 2017 ರಲ್ಲಿ ಫೇಸ್ ಬುಕ್ ಮೂಲಕ ಮೈಸೂರು ಮೂಲದ ಮಹಿಳೆಗೆ ಪರಿಚಯವಾಗಿದ್ದ  ಸತೀಶ್.  ನೀವು ನೋಡೋಕೆ ಚೆನ್ನಾಗಿದ್ದೀರ , ಸಿನಿಮಾ ಧಾರಾವಾಹಿಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿದ್ದ.  ಮದುವೆಯಾಗುವುದಾಗಿಯೂ ನಂಬಿಸಿ ಮೂರು ದಿನ ಮಹಿಳೆಯನ್ನ ಮಡಿಕೇರಿಗೆ ಕರೆದೊಯ್ದಿದ್ದ.  

ಬಳಿಕ ಮನೆ ಮಾಡಬೇಕು ಅಂತಾ ಮಹಿಳೆ ಬಳಿ ಹಣ ಕೇಳಿದ್ದ.  ಮನೆಯಲ್ಲಿದ್ದ ಒಡವೆಗಳನ್ನ ಅಡ ಇಟ್ಟು ಐದು ಲಕ್ಷ ಹಣ ಹೊಂದಿಸಿಕೊಟ್ಟಿದ್ದರು ಮಹಿಳೆ.  ಅಲ್ಲದೇ ನಿಮ್ಮವರು ಯಾರಾದ್ರು  ಇದ್ರೆ ಹೇಳು ಸರ್ಕಾರದಿಂದ ಸೈಟು ಕೊಡಿಸ್ತೇನೆ ಎಂದು ಪುಸಲಾಯಿಸಿದ್ದ.  ಸತೀಶ್ ಮಾತು ನಂಬಿ ಮಹಿಳೆ 90 ಲಕ್ಷ ಕೊಟ್ಟು ಕೈ ಸುಟ್ಟುಕೊಂಡಿದ್ದಾರೆ.  ಆರೋಪಿ ಸತೀಶ್ ರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.