ಇಂದು ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ

First Published 12, Mar 2018, 8:42 AM IST
Mysuru University Convocation Ceremony today
Highlights

ಇಂದು ಮೈಸೂರು ವಿಶ್ವ ವಿದ್ಯಾನಿಲಯದ  98 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯಲಿದೆ. 

ಮೈಸೂರು (ಮಾ. 12): ಇಂದು ಮೈಸೂರು ವಿಶ್ವ ವಿದ್ಯಾನಿಲಯದ  98 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯಲಿದೆ. 

ವಿವಿ  ಕ್ರಾಫರ್ಡ್  ಭವನದಲ್ಲಿ ಘಟಿಕೋತ್ಸವ ನಡೆಯಲಿದೆ. ಪದವಿ ಪಡೆದವರಲ್ಲಿ ಈ ಬಾರಿ ಮಹಿಳೆಯರೇ ಮೇಲುಗೈ ಸಾಧಿಸಿದೆ.  ಘಟಿಕೋತ್ಸವದಲ್ಲಿ  27,502 ಅಭ್ಯರ್ಥಿಗಳಿಗೆ ಪದವಿ  ಪ್ರದಾನ ಮಾಡಲಾಗುತ್ತದೆ.  17,122 ಮಹಿಳೆಯರು, 10380 ಪುರುಷರಿಗೆ ಪದವಿ ಪ್ರದಾನ ಮಾಡಲಾಗುತ್ತದೆ.  ಶೇ. 62 ರಷ್ಟು ಮಹಿಳೆಯರು ಮತ್ತು ಶೇ. 38 ರಷ್ಟು  ಪುರುಷರ ಶೈಕ್ಷಣಿಕ ಸಾಧನೆಗೈದಿದ್ದಾರೆ. 

575 ಅಭ್ಯರ್ಥಿಗಳಿಗೆ ವಿವಿಧ  ವಿಷಯಗಳಲ್ಲಿ ಪಿ ಹೆಚ್ ಡಿ ಪದವಿ ಪ್ರದಾನ ಮಾಡಲಾಗುವುದು.  348 ಪದಕಗಳು, 168 ಬಹುಮಾನಗಳು ಸೇರಿ  ಒಟ್ಟು 207 ಅಭ್ಯರ್ಥಿಗಳಿಗೆ ಗೌರವ ನೀಡಲಾಗುವುದು.  ಈ ಬಾರಿ  ಘಟಿಕೋತ್ಸವಕ್ಕೆ  ರಾಜ್ಯಪಾಲರು ಗೈರು ಹಾಜರಾಗಲಿದ್ದಾರೆ. 

 

loader