ಅಧಿಕೃತ ಕಾನೂನು ಪದವಿ ಪಡೆಯದೇ ವ್ಯಕ್ತಿಯೊಬ್ಬರು 21 ವರ್ಷ ಕಾಲ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಆಗಿ ಹಾಗೂ 17 ವರ್ಷ ವಕೀಲನಾಗಿ ಕಾರ್ಯನಿರ್ವಹಿಸಿದ ಕುತೂಹಲ ಪ್ರಸಂಗ ತಮಿಳುನಾಡಿನಲ್ಲಿ ವರದಿಯಾಗಿದೆ.

ಚೆನ್ನೈ: ಅಧಿಕೃತ ಕಾನೂನು ಪದವಿ ಪಡೆಯದೇ ವ್ಯಕ್ತಿಯೊಬ್ಬರು 21 ವರ್ಷ ಕಾಲ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಆಗಿ ಹಾಗೂ 17 ವರ್ಷ ವಕೀಲನಾಗಿ ಕಾರ್ಯನಿರ್ವಹಿಸಿದ ಕುತೂಹಲ ಪ್ರಸಂಗ ತಮಿಳುನಾಡಿನಲ್ಲಿ ವರದಿಯಾಗಿದೆ.

ಪಿ. ನಟರಾಜನ್ ಎಂಬುವರೇ ಇಷ್ಟು ವರ್ಷ ಮ್ಯಾಜಿಸ್ಟ್ರೇಟ್ ಹಾಗೂ ವಕೀಲರಾಗಿ ಕೆಲಸ ಮಾಡಿದವರು. ಕಳೆದ ವರ್ಷ ವಕೀಲರು ಸರ್ಟಿಫಿಕೇಟುಗಳನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದ ಬಳಿಕ ತಮಿಳುನಾಡು ಬಾರ್ ಕೌನ್ಸಿಲ್‌ನವರು ವಕೀಲರ ಪ್ರಮಾಣಪತ್ರ ಪರಿಶೀಲಿಸಿದ್ದಾರೆ.

ಈ ವೇಳೆ ನಟರಾಜನ್ ಮಾಡಿದ್ದ ಕಾನೂನು ಪದವಿಗೆ ಮಾನ್ಯತೆ ಇಲ್ಲ ಎಂದು ಬೆಳಕಿಗೆ ಬಂದಿದೆ.

ನಟರಾಜನ್ ಕರ್ನಾಟಕದ ಮೈಸೂರು ವಿವಿಯ ಶಾರದಾ ಕಾಲೇಜಿನಲ್ಲಿ ‘ಬಿಜಿಎಸ್’ ಎಂಬ ಕಾನೂನು ತತ್ಸಮಾನ ಪದವಿಯನ್ನು ದೂರಶಿಕ್ಷಣದಿಂದ ಪಡೆದಿದ್ದರು.

1975ರಿಂದ 1978ರವರೆಗೆ ಅವರು ಈ ಕೋರ್ಸು ಕಲಿತಿದ್ದರು. ಬಳಿಕ 4 ವರ್ಷ ವಕೀಲಿಕೆ ಮಾಡಿ 1982ರಲ್ಲಿ ಜುಡಿಶಿಯಲ್ ಮ್ಯಾಜಿಸ್ಟ್ರೇಟರಾದರು. 2003ರಲ್ಲಿ ನಿವೃತ್ತಿಯಾಗಿದ್ದರು.