Asianet Suvarna News Asianet Suvarna News

ಮೈಸೂರು ದಸರಾ 2018: ಅರಮನೆಯಲ್ಲಿಂದು ನಡೆಯುವ ಕಾರ್ಯಕ್ರಮಗಳೇನು..?

ನಾಡಹಬ್ಬ ದಸರಾ ಕಾರ್ಯಕ್ರಮ ಅದ್ಧೂರಿಯಿಂದ ಸಾಗುತ್ತಿದ್ದು ವಿಜಯ ದಶಮಿಯ ದಿನವಾದ ಇಂದು  ಅರಮನೆ ಅಂಗಳದಲ್ಲಿ  ಖಾಸಗಿ ದಸರಾ ಕಳೆಕಟ್ಟಲಿದೆ. ವಿಜಯ ದಶಮಿಯಂದೂ ಸಾಂಪ್ರದಾಯಿಕ ಪೂಜೆ, ಪುನಸ್ಕಾರಗಳು ನೆರವೇರಲಿದ್ದು ಅರಮನೆಯ ಕಾರ್ಯಕ್ರಮಗಳು ಹೀಗಿರಲಿದೆ.

Mysuru Dasara 2018 Here 19th Vijayadashami Schedule Details
Author
Mysuru, First Published Oct 19, 2018, 9:42 AM IST | Last Updated Oct 19, 2018, 9:42 AM IST

ಮೈಸೂರು[ಅ.19]: ನಾಡಹಬ್ಬ ದಸರಾ ಕಾರ್ಯಕ್ರಮ ಅದ್ಧೂರಿಯಿಂದ ಸಾಗುತ್ತಿದ್ದು ವಿಜಯ ದಶಮಿಯ ದಿನವಾದ ಇಂದು  ಅರಮನೆ ಅಂಗಳದಲ್ಲಿ  ಖಾಸಗಿ ದಸರಾ ಕಳೆಕಟ್ಟಲಿದೆ. ವಿಜಯ ದಶಮಿಯಂದೂ ಸಾಂಪ್ರದಾಯಿಕ ಪೂಜೆ, ಪುನಸ್ಕಾರಗಳು ನೆರವೇರಲಿದ್ದು ಅರಮನೆಯ ಕಾರ್ಯಕ್ರಮಗಳು ಹೀಗಿರಲಿದೆ.
ಬೆಳಗ್ಗೆ 8.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ ಆಗಮನ. ಪಟ್ಟದ ಆನೆಯೊಂದಿಗೆ ಪಟ್ಟದ ಕುದುರೆ, ಹಸು ಸಾಥ್.
ಪುಟ್ಟ ಚಿನ್ನಮ್ಮಣ್ಣಿ ನಿಧನದಿಂದಾಗಿ ಉತ್ತರ ಪೂಜೆ ಹಾಗೂ ವಜ್ರಮುಷ್ಠಿ ಕಾಳಗವನ್ನು ರದ್ದು ಮಾಡಲಾಗಿದೆ.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಬೆಳ್ಳಿ ರಥದಲ್ಲಿ ವಿಜಯ ಯಾತ್ರೆ ನೆರವೇರಲಿದೆ.
ಬೆಳ್ಳಿ ರಥದಲ್ಲಿ ಕುಳಿತು ದೇವಾಲಯಕ್ಕೆ ಯಾತ್ರೆಗೆ ತೆರಳಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಿರುವ ಯದುವೀರ್.
ವಿಜಯ ಯಾತ್ರೆ ನಂತರ ಶ್ರೀ ಚಾಮುಂಡೇಶ್ವರಿ ಪ್ರತಿಮೆ ಸ್ಥಳಾಂತರ
ಕನ್ನಡಿ ತೊಟ್ಟಿಯಿಂದ ಚಾಮುಂಡಿ ತೊಟ್ಟಿಗೆ ಬಿಜಯ ಮಾಡಲಿರುವ ಪ್ರತಿಮೆ.
ನಂತರ ಜಂಬೂ ಸವಾರಿಗೆ ತೆರಳಲಿರುವ ಉತ್ಸವ ಮೂರ್ತಿ

Latest Videos
Follow Us:
Download App:
  • android
  • ios