ನಾಡಹಬ್ಬ ದಸರಾಕ್ಕೆ ರಾಜ್ಯದ ಜನತೆಗೆ ಶುಭಕೋರಿರುವ ಸಿದ್ದರಾಮಯ್ಯ, ಉತ್ತಮ ಮಳೆ ಬೆಳೆಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಸಿಕೊಳ್ಳುತ್ತೇನೆ ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಹೇಳಿದ್ದರು.
ಮೈಸೂರು(ಅ.11): ಮಳೆಯಿಲ್ಲದೆ ಬಸವಳಿದಿದ್ದ ರಾಜ್ಯಕ್ಕೆ ನಾಡಹಬ್ಬ ದಸರಾದಂದು ಮೈಸೂರಿನಲ್ಲಿ ವರುಣನ ಸಿಂಚನವಾಗಿದೆ.
ನಾಡಹಬ್ಬ ದಸರಾಕ್ಕೆ ರಾಜ್ಯದ ಜನತೆಗೆ ಶುಭಕೋರಿರುವ ಸಿದ್ದರಾಮಯ್ಯ, ಉತ್ತಮ ಮಳೆ ಬೆಳೆಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಸಿಕೊಳ್ಳುತ್ತೇನೆ ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಹೇಳಿದ್ದರು. ಇದಾದ ಕೆಲಹೊತ್ತಿನಲ್ಲೇ ಬನ್ನಿ ಪೂಜೆ ಮುಗಿಯುತ್ತಿದ್ದಂತೆ ದಸರಾ ಮೆರವಣಿಗೆಯ ಸಂದರ್ಭದಲ್ಲೇ ಮೈಸೂರಿನಲ್ಲಿ ಮಳೆ ತಂಪೆರೆದಿದೆ.
ನಂದಿಧ್ವಜ ಪೂಜೆ ಬಳಿಕ ಮಾತನಾಡಿದ ಸಿ.ಎಂ. ಸಿದ್ದರಾಮಯ್ಯ, ಇಂದು ನಾಳೆ ಹಿಂಗಾರು ಮಳೆಯಾದರೆ ರೈತರ ಮೊಗದಲ್ಲಿ ಸಂತಸ ಉಂಟಾಗುತ್ತದೆ. ಕಾವೇರಿ ನೀರಿನ ಕುರಿತು ತೀರ್ಪು ನಮ್ಮ ಪರ ಬರುವ ವಿಶ್ವಾಸವಿದೆ. ಏಕೆಂದರೆ ನ್ಯಾಯ ನಮ್ಮ ಪರ ಇದೆ ಎಂದಿದ್ದರು.
ಸುಮಾರು 16 ವರ್ಷಗಳ ನಂತರ ದಸರಾ ಮೆರವಣಿಗೆ ಸಂದರ್ಭದಲ್ಲಿ ವರುಣನ ಸಿಂಚನವಾಗಿದ್ದು. ದಸರಾ ಜಂಬೂಸವಾರಿ ನೋಡಲು ಬಂದ ಪ್ರೇಕ್ಷಕರು ಮಳೆಯಿಂದ ರಕ್ಷಿಸಿಕೊಳ್ಳಲು ಕುರ್ಚಿಯ ಸಹಾಯ ಪಡೆಯಬೇಕಾದ ಪರಿಸ್ಥಿತಿ ಉಂಟಾಯಿತು.
