Asianet Suvarna News Asianet Suvarna News

ವಿಶ್ವವಿಖ್ಯಾತ ದಸರಾ ಮಹೋತ್ಸವ-2016: ಆಕಾಶವನ್ನೇ ನಾಚಿಸುವಂತೆ ಅರಮನೆ ಸಿಂಗಾರ

Mysore Palace is Ready For Dasara 2016

ಮೈಸೂರು(ಸೆ.30): ನಾಡಹಬ್ಬ ದಸರಾ ಅಂಗವಾಗಿ ಇಡೀ ಮೈಸೂರು ನಗರವೇ ಕಣ್ಮನ ಸೆಳೆಯುವ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ. ತನ್ನ ತೀಕ್ಷ್ಣ ಬೆಳಕಿನಿಂದ ಆಕಾಶವನ್ನೇ ನಾಚಿಸುವಂತೆ ಅರಮನೆ ನಗರಿ ಸಿಂಗಾರಗೊಂಡಿದೆ. ಇನ್ನು ಪ್ರವಾಸಿಗರನ್ನು ಸೆಳೆಯಲು ಜಿಲ್ಲಾಡಳಿತ ಕೂಡ ಸಕಲ ರೀತಿಯಲ್ಲಿ ಸಜ್ಜಾಗಿದೆ.

ವಿಶ್ವ ವಿಖ್ಯಾತ ದಸರಾ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರು ನಗರದ ಸೌಂದರ್ಯ, ದೀಪಗಳ ಅಲಂಕಾರದಿಂದ ಇಮ್ಮಡಿಯಾಗಿದೆ. ಅದರಲ್ಲೂ ಈ ಬಾರಿ ನಗರದ ಪ್ರಮುಖ 42 ಸರ್ಕಲ್​​ಗಳು ಒಂದೊಂದು ರೀತಿಯ ವಿಶೇಷ ದೀಪಾಲಂಕಾರದಿಂದ ಗಮನ ಸೆಳೆಯುತ್ತಿದೆ.

ಮೈಸೂರಿನ 240 ಪಾರಂಪರಿಕ ಕಟ್ಟಡಗಳು ವಿಶೇಷ ಸುಣ್ಣ ಬಣ್ಣದ ಹೊಳಪಿನೊಂದಿಗೆ ಕಂಗೊಳಿಸುತ್ತಿವೆ. ನಗರದಲ್ಲಿ 14 ವಿವಿಧ ಬಗೆಯ ಅರಮನೆಗಳಿದ್ದು ನವರಾತ್ರಿ ಸಂದರ್ಭದಲ್ಲಿ ಎಲ್ಲಾ ಅರಮನೆಗಳೂ ವಿದ್ಯುತ್ ದೀಪಗಳಿಂದ ಝಗಮಗಿಸಲಿವೆ.

ಇನ್ನು ಪವನ್ ಹೆನ್ಸ್ ಹೆಲಿಕ್ಯಾಪ್ಟರ್ ಮೂಲಕ ಮೈಸೂರನ್ನು ಸುತ್ತು ಹಾಕುವುದು ಪ್ರಮುಖ ಆಕರ್ಷಣೆಯಾಗಿದೆ. ಇದಕ್ಕಾಗಿ ವಯಸ್ಕರಿಗೆ 2499 ಮಕ್ಕಳಿಗೆ 2299 ರೂ. ಗಳಿಗೆ ಈ ಅವಕಾಶ ಕಲ್ಪಿಸಲಾಗಿದೆ.

ಹಾಗೆಯೇ ದಸರಾ ಉತ್ಸವಕ್ಕೆ ಬಿಗಿಭದ್ರತೆ ಏರ್ಪಡಿಸಲಾಗಿದೆ. ಚಾಮುಂಡಿಬೆಟ್ಟಕ್ಕೆ ಅಕ್ಟೋಬರ್ 1ರಿಂದ 16ರವರೆಗೆ ಬೆಳಗ್ಗೆ 6ರಿಂದ ರಾತ್ರಿ 8.30ರವರೆಗೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ.

ಒಟ್ನಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಗಲು ಎರಡು ದಿನ ಬಾಕಿ ಇರುವಂತೆ ಸಾಂಸ್ಕೃತಿಕ ನಗರಿಯಲ್ಲಿ ಭರದ ಸಿದ್ಧತೆ ಆರಂಭವಾಗಿದೆ. ಕಾವೇರಿ ವಿವಾದದ ಕರಿನೆರಳಿದ್ದರೂ ದಸರಾಕ್ಕೆ ಸಿದ್ಧತೆಗಳು ನಡೆಯುತ್ತಿವೆ.

Latest Videos
Follow Us:
Download App:
  • android
  • ios