ಕಳೆದ ಒಂದು ತಿಂಗಳಿನಿಂದ ಹಣದ ಬವಣೆಯಿಂದಾಗಿ ದೇಶದ ಎಲ್ಲಾ ಪ್ರವಾಸಿ ತಾಣಗಳು ಬಣಗುಡುತ್ತಿದ್ದು, ಈ ಸಮಸ್ಯೆಯಿಂದ ಹೊರ ಬರಲು ಮೈಸೂರು ಜಿಲ್ಲಾಡಳಿತ ಹೊಸ ಮಾರ್ಗವನ್ನು ಕಂಡುಕೊಂಡಿದೆ. ಆನ್ ಲೈನ್ ಸೇವೆಯ ಮುಖಾಂತರ ಪ್ರವಾಸಿಗರಿಗೆ ಚಿಲ್ಲರೆ ಸಮಸ್ಯೆಯಿಂದ ಸುಧಾರಿಸಿಕೊಳ್ಳಲು ಚಿಂತನೆ ನಡೆಸಿದೆ. ಸದ್ಯ ಮೈಸೂರು ಅರಮನೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಹೆಚ್ಚು ಬರುತ್ತಿದ್ದು ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತದ ಯೋಜನೆಗೆ ಮೈಸೂರು ಅರಮನೆ ಮಂಡಳಿ ಅಸ್ತು ಎಂದಿದೆ. ಅದಕ್ಕೆ ಪೂರಕ ಎನ್ನುವಂತೆ ರಾಜ್ಯ ಸರ್ಕಾರವೂ ಬೆಂಬಲ ಸೂಚಿಸಿದ್ದು, ಅದಕ್ಕಾಗಿ ಬುಕ್​ ಮೈ ಶೋ ಕಂಪನಿಗೆ ಪೈಲಟ್​ ಪ್ರಾಜೆಕ್ಟ್​ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ.

ಮೈಸೂರು(ಡಿ.01): ನೋಟ್ ಬ್ಯಾನ್ ಮಾಡಿ ಇನ್ನೇನೂ ತಿಂಗಳು ಕಳೆಯುತ್ತ ಬಂದಿದೆ. ಆದ್ರೂ ಸಹ ಜನರಿಗೆ ಹಣದ ಅಭಾವ ಮಾತ್ರ ಕಡಿಮೆಯಾಗುತ್ತಲೆ ಇಲ್ಲಾ. ಜೊತೆಗೆ ಇದರಿಂದಾಗಿ ಪ್ರವಾಸಿ ತಾಣಗಳಿಗೂ ಸಹ ಭಾರಿ ಹೊಡೆತ ಬಿದ್ದಿರುವುದು ಎಲ್ಲರಿಗೂ ತಿಳಿದಿರುವ ಸತ್ಯ . ಸದ್ಯ ಪ್ರವಾಸಿ ತಾಣಗಳು ಎಂದಿನಂತೆ ಜಗಮಗಿಸಲು ಇಲ್ಲಿನ ಜಿಲ್ಲಾಡಳಿತ ಯಾವ ತಯಾರಿ ನಡೆಸಿದೆ? ಇಲ್ಲಿದೆ ವಿವರ.

ಕಳೆದ ಒಂದು ತಿಂಗಳಿನಿಂದ ಹಣದ ಬವಣೆಯಿಂದಾಗಿ ದೇಶದ ಎಲ್ಲಾ ಪ್ರವಾಸಿ ತಾಣಗಳು ಬಣಗುಡುತ್ತಿದ್ದು, ಈ ಸಮಸ್ಯೆಯಿಂದ ಹೊರ ಬರಲು ಮೈಸೂರು ಜಿಲ್ಲಾಡಳಿತ ಹೊಸ ಮಾರ್ಗವನ್ನು ಕಂಡುಕೊಂಡಿದೆ. ಆನ್ ಲೈನ್ ಸೇವೆಯ ಮುಖಾಂತರ ಪ್ರವಾಸಿಗರಿಗೆ ಚಿಲ್ಲರೆ ಸಮಸ್ಯೆಯಿಂದ ಸುಧಾರಿಸಿಕೊಳ್ಳಲು ಚಿಂತನೆ ನಡೆಸಿದೆ. ಸದ್ಯ ಮೈಸೂರು ಅರಮನೆಗೆ ದೇಶ ವಿದೇಶಗಳಿಂದ ಪ್ರವಾಸಿಗರು ಹೆಚ್ಚು ಬರುತ್ತಿದ್ದು ಪ್ರವಾಸಿಗರ ಅನುಕೂಲಕ್ಕಾಗಿ ಜಿಲ್ಲಾಡಳಿತದ ಯೋಜನೆಗೆ ಮೈಸೂರು ಅರಮನೆ ಮಂಡಳಿ ಅಸ್ತು ಎಂದಿದೆ. ಅದಕ್ಕೆ ಪೂರಕ ಎನ್ನುವಂತೆ ರಾಜ್ಯ ಸರ್ಕಾರವೂ ಬೆಂಬಲ ಸೂಚಿಸಿದ್ದು, ಅದಕ್ಕಾಗಿ ಬುಕ್​ ಮೈ ಶೋ ಕಂಪನಿಗೆ ಪೈಲಟ್​ ಪ್ರಾಜೆಕ್ಟ್​ ರೂಪಿಸಲು ಸರ್ಕಾರ ಚಿಂತನೆ ನಡೆಸಿದೆ.

ಶೀಘ್ರದಲ್ಲಿಯೇ ಮೈಸೂರಿನ ಜಗದ್ವಿಖ್ಯಾತ ಮೈಸೂರು ಅರಮನೆ ಸೇರಿ ಸಾಂಸ್ಕೃತಿಕ ನಗರಿಯ ನಾಲ್ಕು ಪ್ರವಾಸಿ ತಾಣಗಳಾದ ಮೃಗಾಲಯ, ಚಾಮುಂಡಿಬೆಟ್ಟ ಹಾಗೂ ಕೆಆರ್​ಎಸ್​ ವೀಕ್ಷಣೆಗೆ ಟಿಕೆಟ್​ ಖರೀದಿ ಪ್ರಯಾಸ ತಪ್ಪಿಸುವ ಕ್ಯಾಷ್​'ಲೆಸ್​ಯೋಜನೆಯೊಂದು ತಲೆಯೆತ್ತಲಿವೆ. ಇದರಿಂದಾಗಿ ಮೈಸೂರು ಜಿಲ್ಲಾಡಳಿತ ನಡೆಸುತ್ತಿರುವ ಈ ಹೊಸ ಪ್ರಯತ್ನಕ್ಕೆ ಪ್ರವಾಸಿಗರಿಂದ ಸಕಾರಾತ್ಮಕ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇನ್ನು ಪ್ರವಾಸಿಗರಿಗೆ ಮೈಸೂರು ಅರಮನೆಯ ಇತಿಹಾಸ ತಿಳಿಸಿಕೊಡುವ ಪ್ರವಾಸೀ ಗೈಡ್​ಗಳಂತೂ ಫುಲ್​ ಖುಷ್ ಆಗಿದ್ದಾರೆ.

ಒಟ್ಟಿನಲ್ಲಿ, ಮೈಸೂರು ಜಿಲ್ಲಾಡಳಿತದ ಈ ಯೋಜನೆ ಕೇಂದ್ರ ಸರ್ಕಾರ ಕ್ಯಾಷ್​ಲೆಸ್​ ವಹಿವಾಟು ನಡೆಸಬೇಕೆಂಬ ಪರಿಕಲ್ಪನೆಗೂ ಪೂರಕವಾಗಿದೆ ಎಂಬುದು ಸಂತಸದ ವಿಚಾರ ಎಂದು ಹೇಳುತ್ತಾರೆ ಅರಮನೆಯ ಪ್ರವಾಸೀ ಗೈಡ್​.