ಬಲಪಂಥೀಯ ಮುಖಂಡರ ಅನುಮಾನಾಸ್ಪದ ಸಾವುಗಳ ಪಟ್ಟಿಗೆ ಈಗ ರವಿ ಮಾಗಲಿಯ ಪ್ರಕರಣವೂ ಸೇರ್ಪಡೆಗೊಂಡಂತಾಗಿದೆ.
ಮೈಸೂರು(ನ. 05): ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ರವಿ ಮಾಗಲಿ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಪಿರಿಯಾಪಟ್ಟಣ ತಾಲೂಕಿನ ಮಾಗಲಿ ಗ್ರಾಮದ ಹೊರವಲಯದ ಕಾಡಿನ ರಸ್ತೆ ಬದಿಯಲ್ಲಿ ರವಿ ಮಾಗಲಿಯವರ ಶವ ಪತ್ತೆಯಾಗಿದೆ. ಅವರ ತಲೆ ಹಾಗೂ ಮುಖಕ್ಕೆ ಗಾಯಗಳಾಗಿವೆ. ಬೈಕ್'ನಲ್ಲಿ ಬರುತ್ತಿದ್ದ ವೇಳೆ ರವಿ ಮಾಗಲಿ ಅಪಘಾತಗೊಂಡಿರಬಹುದೆಂದು ಸದ್ಯ ಪೊಲೀಸರು ಶಂಕಿಸಿದ್ದಾರೆ. ಆದರೆ, ರವಿ ಮಾಗಲಿಯ ಕುಟುಂಬಸ್ಥರು ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
ನ.10ರಂದು ಟಿಪ್ಪು ಜಯಂತಿ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್'ಪೆಕ್ಟರ್ ಸಿದ್ದಯ್ಯನವರ ನೇತೃತ್ವದಲ್ಲಿ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ರವಿ ಮಾಗಲಿಯವರೂ ಪಾಲ್ಗೊಂಡಿದ್ದರು. ಆ ಸಭೆ ಮುಗಿಸಿಕೊಂಡು ರಾತ್ರಿ 8:30ರ ವೇಳೆ ಮನೆಗೆ ಹಿಂತಿರುಗುವಾಗ ಈ ದುರ್ಘಟನೆ ನಡೆದಿದೆ. ಪಿರಿಯಾಪಟ್ಟಣ ತಾಲೂಕಿನಾದ್ಯಂತ ಸದ್ಯ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಲಪಂಥೀಯ ಮುಖಂಡರ ಅನುಮಾನಾಸ್ಪದ ಸಾವುಗಳ ಪಟ್ಟಿಗೆ ಈಗ ರವಿ ಮಾಗಲಿಯ ಪ್ರಕರಣವೂ ಸೇರ್ಪಡೆಗೊಂಡಂತಾಗಿದೆ.
