ಹೊಸದಿಲ್ಲಿ: ಮೋದಿಯನ್ನ ಸಂತನೆಂದು ಹಾಡಿ ಹೊಗಳಿದ ಇಂಡೋನೇಷ್ಯಾ ಅಧ್ಯಕ್ಷ ಜಾಕೋ ವಿಡೋಡೋ, ತಮ್ಮ ಕೌಟುಂಬಿಕ ಸದಸ್ಯರ ವಿಚಾರವನ್ನು ಹಂಚಿಕೊಂಡು ತಮ್ಮ ಮೊಮ್ಮಗನಿಗೆ ಶ್ರೀ ನರೇಂದ್ರನೆಂದು ಹೆಸರಿಟ್ಟಿರುವುದಾಗಿ ಹೇಳಿದ್ದಾರೆ.

2016ರಲ್ಲಿ ಜನಿಸಿದ ಹಿರಿಯ ಮಗ ಗಿಬ್ರನ್ ರಾಕಬೂಮಿಂಗ್ ಮಗನಿಗೆ ನರೇಂದ್ರನೆಂದು ಹೆಸರಿಟ್ಟಿದ್ದಾಗೆ ಅವರು ಹೇಳಿದ್ದಾರೆ.

ಇಂಡೋನೇಷ್ಯಾ ಅಧ್ಯಕ್ಷ ಜಾಕೋ ವಿಡೋಡೋ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಯೋಜಿಸಿದ್ದ ಔತಣಕೂಟದ ವೇಳೆ ಖ್ಯಾತ ಗಾಯಕಿ ಫ್ರೈಡಾ ಲೂಸಿಯಾನಾ ‘ಸಾಬರಮತಿ ಕೇ ಸಂತ್‌’ ಎಂಬ ಹಿಂದಿ ಹಾಡನ್ನು ಹಾಡಿ ರಂಜಿಸಿದರು.

ಇದು ಮೋದಿಯವರು ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಇಂಡೋನೇಷ್ಯಾಗೆ ಭೇಟಿ ನೀಡಿದ್ದು, ಅಲ್ಲಿ ಅಧ್ಯಕ್ಷರ ಅರಮನೆಯಲ್ಲಿ ಮೋದಿಗೆ ಕೆಂಪು ಹಾಸಿನ ಸ್ವಾಗತ ನೀಡಲಾಗಿತ್ತು.