Asianet Suvarna News Asianet Suvarna News

ನಮ್ಮಪ್ಪ ಬದುಕಿದ್ದು, ಸತ್ತಿದ್ದು ದೇಶಕ್ಕಾಗಿ: ರಾಹುಲ್!

ಸೇಕ್ರೆಡ್ ಗೇಮ್ಸ್ ನಲ್ಲಿ ರಾಜೀವ್ ಗಾಂಧಿಗೆ ಅವಹೇಳನ

ಟ್ವಿಟ್ಟರ್‌ನಲ್ಲಿ ಆಕ್ರೋಶ ಹೊರ ಹಾಕಿದ ರಾಹುಲ್

ದೇಶ ಸೇವೆಗಾಗಿ ಜೀವ ಮುಡಿಪಿಟ್ಟಿದ್ದರು ರಾಜೀವ್ ಗಾಂಧಿ

ಕಾಲ್ಪನಿಕ ಪಾತ್ರ ತಂದೆ ಕುರಿತ ದೃಷ್ಟಿಕೋನ ಬದಲಿಸದು
 

My father lived and died in service of India: Rahul Gandhi on ‘Sacred Games’ row

ನವದೆಹಲಿ(ಜು.15): ವೆಬ್ ಸಿರೀಸ್ ಸೇಕ್ರೆಡ್ ಗೇಮ್ಸ್‌ನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬಗ್ಗೆ ಅವಹೇಳನ ಮಾಡಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ನನ್ನ ತಂದೆ ಭಾರತದ ಸೇವೆಗಾಗಿಯೇ ತಮ್ಮ ಜೀವವನ್ನು ಮುಡಿಪಾಗಿಟ್ಟಿದ್ದರು ಎಂದು ರಾಹುಲ್ ಹೇಳಿದ್ದಾರೆ. ಭಾರತದ ಸೇವೆಗಾಗಿಯೇ ನನ್ನ ತಂದೆ ಜೀವಿಸಿದ್ದರು ಮತ್ತು ಮರಣಿಸಿದರು. ವೆಬ್ ಸರಣಿಯ ಕಾಲ್ಪನಿಕ ಪಾತ್ರ ನನ್ನ ತಂದೆಯ ಮೇಲಿನ ದೃಷ್ಟಿಕೋನವನ್ನು ಎಂದಿಗೂ ಬದಲಾಯಿಸದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಾ ಸಂಘ ಮತ್ತು ಬಿಜೆಪಿ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಪಾಲಿಸಬೇಕು ಮತ್ತು ನಿಯಂತ್ರಿಸಬೇಕು ಎಂದು ನಂಬುತ್ತದೆ. ಆದರೆ ನಾನು ಸ್ವಾತಂತ್ರ್ಯವೂ ಮೂಲಭೂತ ಪ್ರಜಾಪ್ರಭುತ್ವದ ಹಕ್ಕು ಎಂದು ನಂಬುತ್ತೇನೆ ಎಂದು ರಾಹುಲ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಸೇಕ್ರೇಡ್ ಗೇಮ್ಸ್‌ನಲ್ಲಿ ರಾಜೀವ್ ಗಾಂಧಿ ವಿರುದ್ಧ ನಿಂದನೀಯ ಪದ ಬಳಸಲಾಗಿದೆ. ಈ ದೃಶ್ಯಗಳನ್ನು ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ದಾಖಲಾಗಿದ್ದು ನಾಳೆ ಅರ್ಜಿಯ ವಿಚಾರಣೆ ನಡೆಯಲಿದೆ.  ನೆಟ್ ಫ್ಲಿಕ್ಸ್, ವೆಬ್ ಸಿರೀಸ್‌ನ ನಿರ್ಮಾಪಕರು ಹಾಗೂ ನಟ ನವಾಜುದ್ದೀನ್ ವಿರುದ್ದ ಪಶ್ಚಿಮ ಬಂಗಾಳದ ಕಾಂಗ್ರೆಸ್ ನಾಯಕ ರಾಜೀವ್ ಕುಮಾರ್ ಸಿನ್ಹಾ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

Follow Us:
Download App:
  • android
  • ios