ಸಮಾಜ ಕಲ್ಯಾಣ ಸಚಿವೆ ರಾಜಿನಾಮೆ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 8, Aug 2018, 10:27 PM IST
Muzaffarpur shelter home rapes: Bihar minister Manju Verma resigns
Highlights

ಪತಿಯ ಮೇಲೆ ಅತ್ಯಾಚಾರದ ಪ್ರಕರಣದಲ್ಲಿ ಶಾಮೀಲಾದ ಆರೋಪ ಕೇಳಿ ಬಂದ ಹಿನ್ನೆಲೆ ಸಚಿವೆಯೊಬ್ಬರು ರಾಜೀನಾಮೆ ನೀಡಿದ್ದಾರೆ.


 

ಪಾಟ್ನಾ[ಆ.8] ಮುಜಾಫರ್ ಪುರ್ ಪುನರ್ವಸತಿ ಕೇಂದ್ರಗಳಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಪತಿಯ ವಿರುದ್ಧ ಕೇಳಿಬಂದ ಆರೋಪದ ನಂತರ ಬಿಹಾರದ ಸಮಾಜ ಕಲ್ಯಾಣ ಇಲಾಖೆ ಸಚಿವೆ ಮಂಜು ವರ್ಮಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆ ಸಮಾಲೋಚನೆ ನಡೆಸಿದ ನಂತರ ಮಂಜು ವರ್ಮಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹೊಸ ರಾಜಕಾರಣದ ಬೆಳವಣಿಗೆ ಕಾರಣವಾಗಿದೆ.

ಬಿಹಾರದ ಮುಜಾಫರ್ ಪುರ್ ಪುನರ್ವಸತಿ ಕೇಂದ್ರದಲ್ಲಿನ ಸುಮಾರು 30ಕ್ಕೂ ಅಧಿಕಾರ ಬಾಲಕಿಯರ ಮೇಲೆ ಅತ್ಯಾಚಾರ  ನಡೆದ ಪ್ರಕರಣ ಇಡೀ ದೇಶದಲ್ಲಿ ಟೀಕೆಗೆ ಗುರಿಯಾಗಿತ್ತು. ಪುನರ್ವಸತಿ ಕೇಂದ್ರ ನಡೆಸುತ್ತಿದ್ದ ವ್ಯಕ್ತಿಯ ಜೊತೆ ಸಚಿವೆ ಮಂಜು ವರ್ಮಾ ಅವರ ಪತಿ ನಿರಂತರವಾಗಿ ಸಂಪರ್ಕದಲ್ಲಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿತ್ತು. ಈ ಎಲ್ಲ ಘಟನೆಗಳ ನಂತರ ಸರಕಾರದ ಮೇಲೆ ಎದುರಾಗುವ ಆರೋಪ ತಪ್ಪಿಸಿಕೊಳ್ಳಲು ಸಚಿವೆ ರಾಜೀನಾಮೆ ನೀಡಿದ್ದಾರೆ.

 

loader