‘ಬೋಗಸ್ ಅಚ್ಛೇ ದಿನ್ ಬದಲಾಗಿ ಏನಾದ್ರೂ ಜುಮ್ಲಾ ಕೊಡಿ’!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 1:28 PM IST
Must give alternative to Modi bogus achche din: Rahul Gandhi
Highlights

ಮೋದಿ ಅವರ ಅಚ್ಛೇ ದಿನ್ ಬೋಗಸ್! ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ! ಜನತೆಗೆ ನೈಜ ಭರವಸೆ ನೀಡುವಂತೆ ಕರೆ! ಮೋದಿ ಅವರದ್ದು ಸಮಾಜ ಒಡೆಯುವ ಕಾಯಕ   

ನವದೆಹಲಿ(ಆ.7): ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಛೇ ದಿನ್ ಬೋಗಸ್ ಎಂದು ಸಾಬೀತಾಗಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ನೈಜ ಭರವಸೆಯನ್ನು ಜನೆತೆಗೆ ನೀಡಬೇಕು ಎಂದು ಅಧ್ಯಕ್ಷ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ಸಂಸದೀಯ ಸಮಿತಿ ಸಭೆಯಲ್ಲಿ ಮಾತನಾಡಿದ ರಾಹುಲ್, ಹಿಂಸೆ, ಅಸಹಿಷ್ಣುತೆ, ದ್ವೇಷವನ್ನೇ ಉಸಿರಾಡುತ್ತಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಹೇಳಿದರು.

ದೇಶದ ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದ್ದು, ಸಮಾಜವನ್ನು ಒಡೆಯಲು ಮೋದಿ ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಇತರ ಬಿಜೆಪಿ ವಿರೋಧಿ ರಾಜಕೀಯ ಪಕ್ಷಗಳು ಮೋದಿ ಅವರ ದುಷ್ಟ ಯೋಜನೆಯನ್ನು ವಿಫಲಗೊಳಿಸಲಿವೆ ಎಂದು ರಾಹುಲ್ ಭರವಸೆ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಅಶಿಸ್ತು, ಉದ್ಯೋಗ ಸೃಷ್ಟಿಸುವಲ್ಲಿ ವಿಫಲತೆ, ಅಂತರಾಷ್ಟ್ರೀಯ ಸಂಬಂಧ ಸುಧಾರಣೆಯಲ್ಲಿ ವಿಫಲತೆ, ಇವೇ ಮುಂತಾದ ವಿಫಲತೆಗಳನ್ನು ಮುಚ್ಚಿಕೊಳ್ಳಲು ಪ್ರಧಾನಿ ಮೋದಿ ಸಮಾಜ ಒಡೆಯುವ ಕೃತ್ಯಕ್ಕೆ ಕೈ ಹಾಕಿದ್ದು, ಇದಕ್ಕೆ ಪ್ರತಿಯಾಗಿ ಜನರ ಸಮಸ್ಯೆಗಳ ನಿವಾರಣೆಗೆ ಕಾಂಗ್ರೆಸ್ ಮುಂದಾಗಲಿದೆ ಎಂದು ರಾಹುಲ್ ಭರವಸೆ ನೀಡಿದರು.

loader