ಪಾಟ್ನಾ (ಆ.02): ಯಾವುದಾದರೂ ಸಂಸ್ಥೆಯನ್ನು ಸೇರಬೇಕಾದರೆ ಮ್ಯಾರಿಟಲ್ ಸ್ಟೇಟಸ್ ಕೊಡುವುದು ಕಡ್ಡಾಯ. ಅದರಲ್ಲಿ ವಿವಾಹಿತರೋ, ಅವಿವಾಹಿತರೋ ಎಂದು ನಮೂದಿಸರಾಗಿತ್ತು. ಆದರೆ ಇಲ್ಲಿ ನೀವು ಸೇರಿಕೊಳ್ಳಬೇಕೆಂದರೆ ಕನ್ಯೆ (ವರ್ಜಿನ್) ಹೌದೋ ಅಲ್ಲವೋ ಎಂಬುದನ್ನು ನಮೂದಿಸಬೇಕು.

ಪಟ್ನಾದ ಇಂದಿರಾ ಗಾಂಧಿ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್’ಗೆ ಸೇರುವವರು ತಾವು ಕನ್ಯೆ ಹೌದೋ ಅಲ್ಲವೋ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು. ಇದನ್ನು ಕಡ್ಡಾಯ ಮಾಡಿರುವುದು ಮಹಿಳಾವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದು ತೀರಾ ವೈಯಕ್ತಿಕ ಮಾಹಿತಿಯಾಗಿದ್ದು ಅದನ್ನು ಕೇಳುವುದರಿಂದ ಅಭ್ಯರ್ಥಿಗಳಿಗೆ ಇರಿಸುಮುರಿಸಾಗುವುದು ಸಹಜ. ಕೇಂದ್ರ ಸರ್ಕಾರ ಕಳುಹಿಸಿದ ಅರ್ಜಿ ನಮೂನೆಯಲ್ಲಿ ಇದನ್ನು ನಮೂದಿಸಲಾಗಿದ್ದು  ಅದನ್ನೇ ನಾವು ಪಾಲಿಸುತ್ತಿದ್ದೇವೆ ಎಂದು ಆಸ್ಪತ್ರೆ ಸೂಪರಿಟೆಂಡೆಂಟ್ ಮನೀಶ್ ಮಂದಾಲ್ ಹೇಳಿದ್ದಾರೆ. ಬಿಹಾರ ಆರೋಗ್ಯ ಸಚಿವ ಮಂಗಲ್ ಪಾಂಡೆ ಈ ಬಗ್ಗೆ ಗಮನ ಹರಿಸುವಂತೆ ಆಸ್ಪತ್ರೆಗೆ ಸೂಚಿಸಿದ್ದಾರೆ.