ಉಡುಪಿಯಲ್ಲೂ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಮುಂಜಾನೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಹೊಸ ಉಡುಗೆ ತೊಟ್ಟು ಪ್ರಾರ್ಥನೆ ಸಲ್ಲಿಸಿ  ಸಂಭ್ರಮಿಸಿದರು.

ಬೆಂಗಳೂರು(ಜೂ.25): ಮುಸ್ಲಿಮರ ಪವಿತ್ರ ಹಬ್ಬ ರಂಜಾನ್‌ ಆಚರಣೆ ರಾಜ್ಯದೆಲ್ಲೆಡೇ ಆರಂಭವಾಗಿದೆ.ಶ್ರದ್ಧಾ ಭಕ್ತಿಯೊಂದಿಗೆ ಮುಸ್ಲೀಮರು ಸಂಭ್ರಮದಿಂದ 'ಈದ್‌ ಉಲ್‌ ಫಿತರ್ ’ ಆಚರಣೆ ಮಾಡಿದರು.

ಉಪವಾಸದ ನಂತರ ನಿನ್ನೆ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ರಂಜಾನ್ ಹಬ್ಬ ಆಚರಿಸಿದರು. ನಗರದ ವಿವಿಧ ಮಸೀದಿ, ಈದ್ಗಾ ಮೈದಾನದಲ್ಲಿ ಸೇರಿದ ಸಾವಿರಾರು ಮುಸ್ಲಿಮರು ಅಲ್ಲಾನಿಗೆ ದುವಾ ಸಲ್ಲಿಸಿದರು. ಪರಸ್ಪರ ಆಲಂಗಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

ಉಡುಪಿಯಲ್ಲೂ ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ಮುಂಜಾನೆ ಸಾಮೂಹಿಕ ಪ್ರಾರ್ಥನೆ ನಡೆಯಿತು. ಹೊಸ ಉಡುಗೆ ತೊಟ್ಟು ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿದರು.

ಇತ್ತ ಕಾರವಾರದಲ್ಲೂ ರಂಜಾನ್ ಹಬ್ಬ ಜೋರಾಗಿತ್ತು. ಭಟ್ಕಳ ನಗರದ ನವಾಯತ್ ಕಾಲೋನಿ, ಮದೀನಾ ಕಾಲೋನಿ, ಮುಗ್ಧಂ ಕಾಲೋನಿ, ಚಿನ್ನದ ಪಳ್ಳಿಯಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇನ್ನೂ ಕೆಲವೆಡೆ ನಾಳೆ ರಂಜಾನ್ ಆಚರಣೆ ಸಿದ್ಧತೆ ನಡೆದಿದೆ. ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ, ಜಯನಗರ ಮಸೀದಿ ಸೇರಿದಂತೆ ಹಲವೆಡೆ ರಂಜಾನ್ ಆಚರಣೆ ನಡೆಯಲಿದ್ದು ಸಕಲ ರೀತಿಯಲ್ಲೂ ಸಿದ್ಧತೆ ಮಾಡ್ಕೊಂಡಿದ್ದಾರೆ. ರಸೆಲ್ ಮಾರ್ಕೇಟ್ ಸೇರಿದಂತೆ ಹಲವೆಡೆ ಹಬ್ಬದ ಖರೀದಿ ಜೋರಾಗಿತ್ತು.

ದಾವಣಗೆರೆಯ ಮಿನಿ ಬಜಾರ್​ನಲ್ಲೂ ನಾಳೆಯ ರಂಜಾನ್ ಆಚರಣೆಗೆ ಖರೀದಿ ಜೋರಾಗಿತ್ತು. ಇನ್ನೂ ಉತ್ತರ ಕರ್ನಾಟಕ ಭಾಗದಲ್ಲೂ ನಾಳೆ ರಂಜಾನ್ ಆಚರಣೆ ಕಳೆಗಟ್ಟಲಿದೆ.