ಅಲಿಗಢ[ಜು.09]: ಮುಸ್ಲಿಂ ಮಹಿಳೆಯೋರ್ವಳು ಬಿಜೆಪಿ ಸೇರಿದ್ದಕ್ಕೆ ಆಕ್ರೋಶಗೊಂಡ ಮನೆಯ ಮಾಲೀಕ, ಆಕೆಯನ್ನು ಮನೆಯಿಂದ ಹೊರದಬ್ಬಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಗುಲಿಸ್ತಾನ ಎಂಬ ಮಹಿಳೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಇತ್ತೀಚೆಗೆ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದರು. ಇದೇ ಕಾರಣಕ್ಕೆ ಕ್ರೋಧಗೊಂಡ ಮನೆ ಮಾಲೀಕ ಆಕೆಯನ್ನು ನಿಂದಿಸಿ ಕುಟುಂಬ ಸಮೇತ ಎಲ್ಲರನ್ನೂ ಮನೆಯಿಂದ ಹೊರದಬ್ಬಿದ್ದಾನೆ. ಈ ಹಿನ್ನೆಲೆಯಲ್ಲಿ ಆಕೆ ಮಾಲೀಕನ ವಿರುದ್ಧ ದೂರು ನೀಡಿದ್ದು, ಪೊಲೀಸರು ಮನೆ ಮಾಲೀಕನ ಮಗ ಸುಲ್ತಾನ್‌ನನ್ನು ಬಂಧಿಸಿದ್ದಾರೆ.

ಉಳಿದವರು ತಲೆಮರೆಸಿಕೊಂಡಿದ್ದಾರೆ. ಆದರೆ ಗುಲಿಸ್ತಾನ್‌ ಅವರು ಮನೆ ಬಾಡಿಗೆ ಕಟ್ಟುತ್ತಿರಲಿಲ್ಲ. ಬಾಡಿಗೆ ಕೇಳಿದರೆ ಜಗಳವಾಡುತ್ತಿದ್ದರು. ಇದಕ್ಕಾಗಿ ಮನೆ ಖಾಲಿ ಮಾಡಿಸಲಾಗಿದೆ ಎಂದು ಸುಲ್ತಾನ್‌ ಹೇಳಿದ್ದಾನೆ.