.   ಮಾತೃ ಧರ್ಮಕ್ಕೆ ಮರಳಿರುವ  ಸೈಯದ್ ಅಬ್ಬಾಸ್  20 ವರ್ಷಗಳ ಹಿಂದೆ ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ದ. ಯಾರದೋ  ಒತ್ತಡಕ್ಕೆ ಮುಸ್ಲಿಂ ವಿವಾಹವಾದ ತಕ್ಷಣವೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ.

ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ವ್ಯಕ್ತಿಯೊಬ್ಬ ಇವತ್ತು ತನ್ನ ಪುತ್ರನ ಸಮೇತ ಹಿಂದೂ ಧರ್ಮಕ್ಕೆ ವಾಪಸಾಗಿರುವ ಪ್ರಸಂಗ ಮೈಸೂರಿನಲ್ಲಿ ನಡೆದಿದೆ. ಮಾತೃ ಧರ್ಮಕ್ಕೆ ಮರಳಿರುವ ಸೈಯದ್ ಅಬ್ಬಾಸ್ 20 ವರ್ಷಗಳ ಹಿಂದೆ ಮುಸ್ಲಿಂ ಯುವತಿಯನ್ನ ಮದುವೆಯಾಗಿದ್ದ. ಯಾರದೋ ಒತ್ತಡಕ್ಕೆ ಮುಸ್ಲಿಂ ವಿವಾಹವಾದ ತಕ್ಷಣವೇ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ. ಇಬ್ಬರು ಗಂಡು ಮಕ್ಕಳಾದ ಮೇಲೆ ಪತ್ನಿ ಕಿರಿಯ ಪುತ್ರನ ಜೊತೆ ಕುಟುಂಬ ತೊರೆದು ತಮಿಳುನಾಡಿಗೆ ಹೊರಟುಹೋಗಿದ್ದಾಳೆ. ಇವತ್ತು ಸೈಯದ್ ಅಬ್ಬಾಸ್ ಆರ್ಯಸಮಾಜದ ಪುರೋಹಿತರ ಪೌರೋಹಿತ್ಯದಲ್ಲಿ ಹಿಂದೂ ಧರ್ಮದ ದೀಕ್ಷೆ ಪಡೆದು ಪೂರ್ವಾಶ್ರಮದ ಶೇಷಾದ್ರಿ ಅಂತಾ ಹೆಸರಿಟ್ಟುಕೊಂಡಿದ್ದಾರೆ.