ಕೈದಿಯ ಬೆನ್ನಿಗೆ 'ಓಂ' ಚಿಹ್ನೆಯ ಬರೆ ಎಳೆದ ಜೈಲು ಅಧೀಕ್ಷಕ| ತಿಹಾರ್ ಜೈಲಿನಲ್ಲಿ ಜೈಲು ಅಧೀಕ್ಷನಿಂದ ಅಮಾನವೀಯ ಹಲ್ಲೆ| ಪ್ರಕರಣದ ತನಿಖೆಗೆ ಆದೇಶಿಸಿದ ದೆಹಲಿ ನ್ಯಾಯಾಲಯ| ಅಲ್ಪಸಂಖ್ಯಾತ ಕೈದಿಗೆ 'ಓಂ' ಚಿಹ್ನೆಯ ಬರೆ ಎಳೆದ ಅಧೀಕ್ಷಕ ರಾಜೇಶ್ ಚೌಹಾಣ್|
ನವದೆಹಲಿ(ಏ.20): ತಿಹಾರ್ ಜೈಲಿನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿಚಾರಣಾಧೀನ ಕೈದಿಯೊಬ್ಬನ ಬೆನ್ನಿಗೆ 'ಓಂ' ಚಿಹ್ನೆಯ ಬರೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯ ತನಿಖೆಗೆ ಆದೇಶ ನೀಡಿದೆ.
ಜೈಲಿನ ಡಿಜಿಪಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, 24 ಗಂಟೆಯೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಕಳೆದ ಏಪ್ರಿಲ್ 12ರಂದು ಜೈಲು ಅಧೀಕ್ಷಕ ರಾಜೇಶ್ ಚೌಹಾಣ್, ವಿಚಾರಣಾಧೀನ ಕೈದಿಗೆ ಹಿಂಸೆ ನೀಡಿ 'ಓಂ' ಚಿಹ್ನೆಯ ಬರೆ ಹಾಕಿದ್ದಾರೆ ಎನ್ನಲಾಗಿದೆ.
ಈ ಕುರಿತು ಕೈದಿ ನಬೀರ್ ಪರ ವಕೀಲ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇದೊಂದಿ ಗಂಭೀರ ಪ್ರಕರಣವಾಗಿದ್ದು ಮೊದಲು ಕೈದಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ಬಳಿಕ ಪ್ರಕರಣದ ತನಿಖೆ ನಡೆಸುವಂತೆ ಡಿಜಿಪಿಗೆ ಸೂಚನೆ ನೀಡಿದೆ.
