ಬೆಂಗಳೂರು(ಅ. 12): ರಾತ್ರಿ ವೇಳೆ ಕೆಲಸ ಮುಗಿಸಿಕೊಂಡು ಹೋಗುವ ವ್ಯಕ್ತಿಯೊಬ್ಬನನ್ನ ನಡುರಸ್ತೆಯಲ್ಲಿ ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಂದಿರುವ ಘಟನೆ ಮಂತ್ರಿ ಸ್ಕೈರ್ ಬಳಿ ನಡೆದಿದೆ. ಮೃತನನ್ನ ಲಿಂಗರಾಜು ಎಂದು ಗುರುತಿಸಲಾಗಿದೆ. ಮೃತ ಲಿಂಗರಾಜು ಎಸ್‌ಆರ್‌ಎಸ್ ಟ್ರಾವೆಲ್ಸ್‌'ನಲ್ಲಿ  ಕೆಲಸ ಮಾಡುತಿದ್ದ. ಅದರಂತೆ ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ಸಮಯದಲ್ಲಿ ದುಷ್ಕರ್ಮಿಗಳು ತಂಡವೊಂದು ಆಟೋದಲ್ಲಿ ಬಂದು ಲಿಂಗರಾಜುನನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಸದ್ಯ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದ ಸಿಸಿಟಿವಿ ಆಧರಿಸಿ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.