ಜಯನಗರದ ನಾಲ್ಕನೇ ಹಂತದಲ್ಲಿ ಬೀದಿ ಬದಿ ವ್ಯಾಪಾರ ನಡೆಸುವ ಕುರಿತು ಮೃತ ಅಸ್ಲಾಂ ಪಾಷಾ, ಸೈಯದ್ ಇಮ್ರಾನ್ ಹಾಗೂ ಖಾಜಾ ಎಂಬುವರಿಗೆ ಶಂಶೀರ್ ಹಾಗೂ ತಂಡದೊಂದಿಗೆ ಆಗಾಗ  ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಶಂಶೀರ್ ಮತ್ತು ಟೀಮ್ ಅಸ್ಲಾಂ ತಂಡದ ಮೇಲೆ ಕಳೆದ ರಾತ್ರಿ ಅಟ್ಯಾಕ್ ಮಾಡಿದೆ. ಈ ವೇಳೆ ಅಸ್ಲಾಂ ಗೆ ಚಾಕು ಇರಿದಿದ್ದು ಇಮ್ರಾನ್ ಹಾಗೂ ಖಾಜಾ ಮೇಲೂ ಹಲ್ಲೆ ಮಾಡಿದ್ದಾರೆ.

ಬೆಂಗಳೂರು(ನ.14): ಬೀದಿ ಬದಿ ಬಟ್ಟೆ ವ್ಯಾಪಾರ ನಡೆಸುವ ಸ್ಥಳಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಸ್ಲಾಂ ಪಾಷಾ ಕೊಲೆಯಾದ ದುರ್ದೈವಿ .

ಜಯನಗರದ ನಾಲ್ಕನೇ ಹಂತದಲ್ಲಿ ಬೀದಿ ಬದಿ ವ್ಯಾಪಾರ ನಡೆಸುವ ಕುರಿತು ಮೃತ ಅಸ್ಲಾಂ ಪಾಷಾ, ಸೈಯದ್ ಇಮ್ರಾನ್ ಹಾಗೂ ಖಾಜಾ ಎಂಬುವರಿಗೆ ಶಂಶೀರ್ ಹಾಗೂ ತಂಡದೊಂದಿಗೆ ಆಗಾಗ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಶಂಶೀರ್ ಮತ್ತು ಟೀಮ್ ಅಸ್ಲಾಂ ತಂಡದ ಮೇಲೆ ಕಳೆದ ರಾತ್ರಿ ಅಟ್ಯಾಕ್ ಮಾಡಿದೆ. ಈ ವೇಳೆ ಅಸ್ಲಾಂ ಗೆ ಚಾಕು ಇರಿದಿದ್ದು ಇಮ್ರಾನ್ ಹಾಗೂ ಖಾಜಾ ಮೇಲೂ ಹಲ್ಲೆ ಮಾಡಿದ್ದಾರೆ.

ಗಾಯಾಳುಗಳನ್ನು ನಿಮ್ಹಾನ್ಸ್'ಗೆ ಕರೆದುಕೊಂಡು ಬರುವಾಗ ತೀವ್ರ ರಕ್ತ ಸ್ರಾವವಾಗಿ ಅಸ್ಲಾಂ ಪಾಷಾ ಮೃತಪಟ್ಟಿದ್ದಾರೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲೀಸ್ರು ತನಿಖೆ ಶುರು ಮಾಡಿದ್ದಾರೆ