1 ರು.ಗಾಗಿ ನಡೆದ ಗಲಾಟೆ : ಕೊಲೆಯಲ್ಲಿ ಅಂತ್ಯ

Murder For 1 Rupee
Highlights

ಕೇವಲ 1 ರು. ಗಲಾಟೆಗೆ ವ್ಯಕ್ತಿಯೊಬ್ಬರು ಇಲ್ಲಿನ ಕಲ್ಯಾಣ್‌ನಲ್ಲಿ ಬಲಿಯಾಗಿದ್ದಾರೆ. ರಾಮ್ ಬಾಗ್ ಪ್ರದೇಶದಲ್ಲಿನ ತಮ್ಮ ಮನೆಪಕ್ಕದ ಅಂಗಡಿಯಿಂದ ಮೊಟ್ಟೆ ತರಲೆಂದು ಮನೋಹರ್ ಗಾಮ್ನೆ (54) ತೆರಳಿದ್ದರು. ಗಾಮ್ನೆ ಅಂಗಡಿಯಾತನಿಗೆ 1 ರು. ಕಡಿಮೆ ನೀಡಿದ ಕಾರಣಕ್ಕಾಗಿ ಜಗಳ ಆರಂಭವಾಗಿತ್ತು.

ಥಾಣೆ: ಕೇವಲ 1 ರು. ಗಲಾಟೆಗೆ ವ್ಯಕ್ತಿಯೊಬ್ಬರು ಇಲ್ಲಿನ ಕಲ್ಯಾಣ್‌ನಲ್ಲಿ ಬಲಿಯಾಗಿದ್ದಾರೆ. ರಾಮ್ ಬಾಗ್ ಪ್ರದೇಶದಲ್ಲಿನ ತಮ್ಮ ಮನೆಪಕ್ಕದ ಅಂಗಡಿಯಿಂದ ಮೊಟ್ಟೆ ತರಲೆಂದು ಮನೋಹರ್ ಗಾಮ್ನೆ (54) ತೆರಳಿದ್ದರು. ಗಾಮ್ನೆ ಅಂಗಡಿಯಾತನಿಗೆ 1 ರು. ಕಡಿಮೆ ನೀಡಿದ ಕಾರಣಕ್ಕಾಗಿ ಜಗಳ ಆರಂಭವಾಗಿತ್ತು.

ಗಾಮ್ನೆ ವಿರುದ್ಧ ಅಂಗಡಿ ಮಾಲೀಕ ಕೂಗಾಡಿದ. ಅದನ್ನು ಕೇಳಿಸಿಕೊಂಡು ತೆರಳಿದ್ದ ಗಾಮ್ನೆ, ಮತ್ತೆ ಮಗನೊಂದಿಗೆ ಬಂದು, ತನ್ನನ್ನು ನಿಂದಿಸಿದುದಕ್ಕೆ ಕಾರಣ ಕೇಳಿದ್ದಾರೆ. ಇದು ಇನ್ನೊಂದು ಸುತ್ತಿನ ವಾಗ್ವಾದಕ್ಕೆ ಕಾರಣವಾಗಿದೆ. ಈ ವೇಳೆ ಅಂಗಡಿ ಮಾಲೀಕನ ಮಗ, ಗಾಮ್ನೆ ಮೇಲೆ ಹಲ್ಲೆ ನಡೆಸಿದ್ದು, ಇದು ಗಾಮ್ನೆಯ ಸಾವಿಗೆ ಕಾರಣವಾಗಿದೆ.

loader