ಸದಾಶಿವ ಆಯೋಗದ ವರದಿ ವಿಚಾರ : ಮುನಿಯಪ್ಪ-ಪರಮೇಶ್ವರ್ ನಡುವೆ ವಾಗ್ವಾದ

First Published 14, Jan 2018, 2:26 PM IST
Muniyappa  Parameshwar Clash
Highlights

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎಚ್.ಮುನಿಯಪ್ಪ ನಡುವೆ ಸದಾಶಿವ ಆಯೋಗದ ವರದಿ ಜಾರಿ ವಿಚಾರದ ಚರ್ಚೆ ವೇಳೆ ವಾಗ್ವಾದ ನಡೆದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಉಭಯ ನಾಯಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. 

ಬೆಂಗಳೂರು (ಜ.14): ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎಚ್.ಮುನಿಯಪ್ಪ ನಡುವೆ ಸದಾಶಿವ ಆಯೋಗದ ವರದಿ ಜಾರಿ ವಿಚಾರದ ಚರ್ಚೆ ವೇಳೆ ವಾಗ್ವಾದ ನಡೆದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಉಭಯ ನಾಯಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. 

ವರದಿ ಜಾರಿಗೊಳಿಸಿ ಎಂದು  ಸಂಸದ ಕೆ.ಎಚ್.ಮುನಿಯಪ್ಪ ಅವರು ಪಟ್ಟು ಹಿಡಿದಿದ್ದು, ಕೆ.ಎಚ್.ಮುನಿಯಪ್ಪ ಸಲಹೆಗೆ ಡಾ.ಜಿ.ಪರಮೇಶ್ವರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಪರಮೇಶ್ವರ್ ಅವರು ಆಲೋಚಿಸಿ ತೀರ್ಮಾನ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ನಮ್ಮ ಪಕ್ಷದ ಮೇಲೆ ಈ ವಿಚಾರವು ಕೆಟ್ಟ ಪರಿಣಾಮ ಬೀರಬಾರದು. ಇದು ಚುನಾವಣೆ ಸಮಯ ಆದ್ದರಿಂದ ಈ ಬಗ್ಗೆ ಆಲೋಚನೆ ಅತ್ಯಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.  ಡಾ.ಜಿ.ಪರಮೇಶ್ವರ್ ಅವರ  ಹೇಳಿಕೆಗೆ  ಸಂಸದ ಮುನಿಯಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಇಬ್ಬರು ಮುಖಂಡರನ್ನು ಸುಮ್ಮನಾಗಿಸಿದರು.

loader