ಮುಂಬೈ[ಜು. 30]  ತನ್ನ ಸೊಸೆಗೆ ಲೈಂಗಿಕ ಕಿರುಕಳ ನೀಡಿದ ಆರೋಪದ ಮೇಲೆ 50 ವರ್ಷದ ಆಟೋ ಚಾಲಕನನ್ನು ಮುಂಬೈ ವಿಹಾರ್ ಪೊಲೀಸರು ಬಂಧಿಸಿದ್ದಾರೆ. 

ಮಾವನಿಂದಲೇ ಶೋಷಣೆ ಆಗುತ್ತಿರುವ ಬಗ್ಗೆ ಮಹಿಳೆ ತನ್ನ ಗಂಡನ ಬಳಿ ಹೇಳಿಕೊಂಡಿದ್ದಳು. ಆದರೆ ಗಂಡ ಆಕೆಯ ಮಾತನ್ನು ನಂಬಿರಲಿಲ್ಲ. ಹಾಗಾಗಿ ಮಹಿಳೆ ಸಾಕ್ಷಿ ಸಮೇತ ಮಾವನನ್ನು ಹಿಡಿದಕೊಡುವ ನಿರ್ಧಾರಕ್ಕೆ ಬಂದಿದ್ದರು.

ಅಡುಗೆ ಕೋಣೆಯಲ್ಲಿ ಮೊಬೈಲ್ ಕ್ಯಾಮರಾ ಫಿಕ್ಸ್ ಮಾಡಿದಳು. ಮಾವ ಆಕೆಯ ಮೇಲೆ ಶೋಷಣೆ ಮಾಡಲು ಆಗಮಿಸಿದ.  ಆಕೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಬಂದವ ಸೊಸೆಯ ಎದೆ ಮೇಲೆ ಕೈ ಹಾಕಿದ. ಈ ಎಲ್ಲ ದುರ್ವತನೆಗಳು ಮೊಬೈಲ್‌ ನಲ್ಲಿ ರೆಕಾರ್ಡ್ ಆಗುತ್ತಿದ್ದುದ್ದು ಮಾವನಿಗೆ ಗೊತ್ತಿರಲಿಲ್ಲ.

ಗಂಡನಿಗೆ ಸಾಕ್ಷಿ ಸಮೇತ ವಿಡಿಯೋ ತೋರಿಸಿದಾಗ ಮಗ ಅಪ್ಪನ ಬಳಿ ಪ್ರಶ್ನೆ ಮಾಡಿದ್ದಾನೆ. ಮಗ ಮತ್ತು ಸೊಸೆಯನ್ನು ಮನೆ ಬಿಟ್ಟು ಹೋಗುವಂತೆ ತಂದೆ ಹೇಳಿದ್ದಾನೆ. ಇದಾದ ಮೇಲೆ ದಂಪತಿ  ನಮ್ಮ ಬಳಿ ಬಂದು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.