ಮಹಾರಾಷ್ಟ್ರ ಸರಕಾರವು ಪ್ರತಿಯೊಬ್ಬ ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಅಲ್ಲದೇ, ಗಾಯಾಳುಗಳ ಸಂಪೂರ್ಣ ಚಿಕಿತ್ಸೆಯನ್ನು ಸರಕಾರವೇ ಭರಿಸಲಿದೆ. ಪಶ್ಚಿಮ ರೈಲ್ವೆಯ ಮುಖ್ಯ ಸುರಕ್ಷಾ ಅಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ.

ಮುಂಬೈ(ಸೆ. 29): ಮುಂಬೈನ ಎಲ್ಫಿನ್'ಸ್ಟೋನ್ ರೈಲ್ವೆ ಸ್ಟೇಷನ್ (ಪ್ರಭಾದೇವಿ ಸ್ಟೇಷನ್) ಬಳಿ ಕಾಲ್ತುಳಿತ ದುರ್ಘಟನೆ ಸಂಭವಿಸಿದ್ದು 22 ಜನರು ಸಾವನ್ನಪ್ಪಿದ್ದಾರೆ. ನಿಲ್ದಾಣದಲ್ಲಿರುವ ಮೇಲ್ಸೇತುವೆ (ಫೂಟ್ ಓವರ್ ಬ್ರಿಜ್) ಬಳಿ ಬೆಳಗ್ಗೆ 10:30ಕ್ಕೆ ಸಂಭವಿಸಿದ ಈ ದುರಂತದಲ್ಲಿ 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಐವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಎಲ್ಫಿನ್'ಸ್ಟೋನ್ ಸ್ಟೇಷನ್ ಮತ್ತು ಪಾರೆಲ್ ಸ್ಟೇಷನ್'ಗಳನ್ನು ಕನೆಕ್ಟ್ ಮಾಡುವ ಈ ಮೇಲ್ಸೇತುವೆ ಬಹಳ ಚಿಕ್ಕದಿದೆ. ಮಳೆಯಿಂದಾಗಿ ಜನರು ಮೇಲ್ಸೇತುವೆ ಬಳಿ ಜಮಾಯಿಸಿದಾಗ ತೀವ್ರ ನೂಕುನುಗ್ಗುಲು ಉಂಟಾಗಿ ಕಾಲ್ತುಳಿತ ಸಂಭವಿಸಿದೆ ಎನ್ನಲಾಗಿದೆ.

ಮಹಾರಾಷ್ಟ್ರ ಸರಕಾರವು ಪ್ರತಿಯೊಬ್ಬ ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಅಲ್ಲದೇ, ಗಾಯಾಳುಗಳ ಸಂಪೂರ್ಣ ಚಿಕಿತ್ಸೆಯನ್ನು ಸರಕಾರವೇ ಭರಿಸಲಿದೆ. ಪಶ್ಚಿಮ ರೈಲ್ವೆಯ ಮುಖ್ಯ ಸುರಕ್ಷಾ ಅಧಿಕಾರಿ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ.

ಇದೇ ವೇಳೆ, ಮುಂಬೈನಲ್ಲಿ ಇಂದು ನಡೆಯಬೇಕಿದ್ದ 100 ಹೊಸ ಸಬರ್ಬನ್ ರೈಲ್ವೆ ಸೇವೆಗಳ ಉದ್ಘಾಟನೆಯನ್ನು ರೈಲ್ವೆ ಸಚಿವ ಪಿಯೂಶ್ ಗೋಯಲ್ ರದ್ದು ಮಾಡಿದ್ದಾರೆ