ಮುಂಬೈ[ಸೆ.06]: ಮಳೆಯಿಂದ ಸಂಚಾರ ರದ್ದಾಗಿದ್ದರೂ, ನೂರಾರು ಪ್ರಯಾಣಿಕರನ್ನು ಇಂಡಿಗೋ ಸಂಸ್ಥೆ ಇಡೀ ರಾತ್ರಿ ವಿಮಾನದಲ್ಲೇ ಕೂರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನಯಾನ ಪ್ರಾಧಿಕಾರ ಈ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದೆ.

ಇಂಡಿಗೋ ವಿಮಾನ ಬುಧವಾರ ರಾತ್ರಿ 7.55ಕ್ಕೆ ಮುಂಬೈನಿಂದ ಜೈಪುರಕ್ಕೆ ಹೊರಡಬೇಕಿತ್ತು. ಆದರೆ ಮಳೆಯಿಂದಾಗಿ ಸಂಚಾರ ವಿಳಂಬವಾಗಿತ್ತು. ಬಳಿಕ ಪ್ರತಿಕೂಲ ಹವಾಮಾನದ ಕಾರಣ ಸಂಚಾರ ರದ್ದುಪಡಿಸಲಾಗಿತ್ತು. ಅಂತಿಮವಾಗಿ ಗುರುವಾರ ಬೆಳಗ್ಗೆ ವಿಮಾನ ಮುಂಬೈನಿಂದ ಸಂಚಾರ ಆರಂಭಿಸಿದೆ.

ವಿಮಾನ ಹೀಗೆ 10 ಗಂಟೆ ವಿಳಂಬವಾದರೂ, ಪ್ರಯಾಣಿಕರನ್ನು ವಿಮಾನದಲ್ಲೇ ಕೂರಿಸಿದ್ದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.