ಮುಂಬೈ : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಮುಖಂಡರೋರ್ವರು ರಾಜಕಾರಣವನ್ನೇ ತೊರೆಯುವ ಮನಸ್ಸು ಮಾಡಿದ್ದಾರೆ. ಮುಂಬೈ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಂಸದ ಮಿಲಿಂದ್ ಡಿಯೋರಾ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವ ಸಾಧ್ಯತೆ  ಇಲ್ಲವೆಂದು  ಹೇಳಿದ್ದಾರೆ. 

ಮುಂಬೈ ಕಾಂಗ್ರೆಸ್ ಘಟಕದ ನಾಯಕರ ನಡೆಯಿಂದ ಬೇಸತ್ತಿದ್ದು, ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಅಲ್ಲದೇ ಇತ್ತೀಚೆಗಷ್ಟೇ ಕೆಲವು ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಮುಂಬೈ ಕಾಂಗ್ರೆಸ್ ನಾಯಕತ್ವವನ್ನು ಬದಲಾವಣೆ ಮಾಡಲು ಮನವಿ ಮಾಡಿದ್ದಾರೆ ಎಂದಿದ್ದಾರೆ. 

ಇಲ್ಲಿನ ಕಾಂಗ್ರೆಸ್ ನಾಯಕರು ನಡೆದುಕೊಳ್ಳುವ ರೀತಿಯು ರಾಜಕೀಯವನ್ನೇ ತೊರೆಯಬೇಕೆನ್ನುವಂತೆ ಮಾಡುತ್ತಿದೆ ಎಂದು ಈ ಮೂಲಕ ಮುಂಬೈ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿ ಮುಂಬೈ ಕಾಂಗ್ರೆಸ್ ಕ್ರಿಕೆಟ್ ಕ್ರೀಡಾಂಗಣವಾಗಬಾರದು ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

 ಆದರೆ ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಡಿಯೋರಾ ಮಾಡಿರುವ ಆರೋಪವನ್ನು ಮುಂಬೈ ಘಟಕದ ಅಧ್ಯಕ್ಷ ಸಂಜಯ್ ನಿರುಪಮ್ ಡಿಯೋರಾ ಅಲ್ಲಗಳೆದಿದ್ದಾರೆ.