23 ಮಂದಿಯ ಗುಂಪೊಂದು ಮುಂಬೈ,ಚೆನ್ನೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ಏಕಕಾಲಕ್ಕೆ ಅಪಹರಿಸುವುದಾಗಿ 6 ಮಂದಿ ಹುಡುಗರು ಮಾತನಾಡುತ್ತಿರುವ ಬಗ್ಗೆ ಮಹಿಳೆಯೊಬ್ಬರು ಇಮೇಲ್ ಮಾಡಿದ್ದಾರೆ'

ಮುಂಬೈ(ಏ.16): ವಿಮಾನ ಅಪಹರಣಕ್ಕೆ ಯೋಜನೆ ರೂಪಿಸಿರುವ ಬಗ್ಗೆ ಬೆದರಿಕೆ ಕರೆ ಬಂದ ಹಿನ್ನಲೆಯಲ್ಲಿ ಮುಂಬೈ,ಚೆನ್ನೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

23 ಮಂದಿಯ ಗುಂಪೊಂದು ಮುಂಬೈ,ಚೆನ್ನೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ಏಕಕಾಲಕ್ಕೆ ಅಪಹರಿಸುವುದಾಗಿ 6 ಮಂದಿ ಹುಡುಗರು ಮಾತನಾಡುತ್ತಿರುವ ಬಗ್ಗೆ ಮಹಿಳೆಯೊಬ್ಬರು ಇಮೇಲ್ ಮಾಡಿದ್ದಾರೆ'ಎಂದು ಮೂಲಗಳು ತಿಳಿಸಿವೆ.

'ಈ ಹಿನ್ನಲೆಯಲ್ಲಿ 3 ನಗರಗಳ ನಗರಗಳ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ. ಹೆಚ್ಚುವರಿಯಾಗಿ ಪೊಲೀಸರನ್ನು ನಿಯೋಜಿಸುವುದರ ಜೊತೆ ಇತರ ಪಡೆಗಳನ್ನು ಕರೆಸಿಕೊಳ್ಳುವುದಾಗಿ 'ಸಿಐ'ಎಸ್'ಎಫ್ ಮಹಾ ನಿರ್ದೇಶಕ ಒ.ಪಿ. ಸಿಂಗ್ ತಿಳಿಸಿದ್ದಾರೆ.