ನವದೆಹಲಿ: ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್ , ಭಾನುವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪುತ್ರ ಅಖಿಲೇಶ್ ಸಿಂಗ್ ಜೊತೆ ವೇದಿಕೆ ಹಂಚಿಕೊಂಡರು. 

ಇದು, ತಾವು ರಚಿಸಿರುವ ‘ಸಮಾಜವಾದಿ ಸೆಕ್ಯೂಲರ್ ಮೋರ್ಚಾ’ ಎಂಬ ನೂತನ ಪಕ್ಷಕ್ಕೆ ಮುಲಾಯಂ ಸಿಂಗ್ ಅವರ ಆಶೀರ್ವಾದ ಇದೆ ಎಂಬುದಾಗಿ ಹೇಳಿದ್ದ ಸೋದರ ಶಿವಪಾಲ್ ಯಾದವ್‌ಗೆ ದೊಡ್ಡ ಹಿನ್ನಡೆಯಾದಂತಾಗಿದೆ. 

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸೈಕಲ್  ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಅಖಿಲೇಶ್ ಜೊತೆ ಮುಲಾಯಂ ಹಾಜರಿದ್ದರು.