ಮುಂಬೈ :  ಮಗನ ಮದುವೆಗೂ ಮುನ್ನ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಮುಂಬೈ ಪೊಲೀಸರ ಬಾಯಿ ಸಿಹಿ ಮಾಡಿದ್ದಾರೆ. ಮುಂಬೈನ 50 ಸಾವಿರ ಪೊಲೀಸ್‌ ಸಿಬ್ಬಂದಿಗೆ ಸಿಹಿ ತಿಂಡಿಯ ಬಾಕ್ಸ್‌ಗಳನ್ನು ಮುಕೇಶ್‌ ಅಂಬಾನಿಯ ಕುಟುಂಬದ ವತಿಯಿಂದ ಕಳುಹಿಸಿಕೊಟ್ಟಿದ್ದಾರೆ.

ಮುಕೇಶ್‌ ಅಂಬಾನಿ ಪುತ್ರ ಆಕಾಶ್‌ ಅಂಬಾನಿ ಮಾ.9ರಂದು ವಿವಾಹವಾಗುತ್ತಿದ್ದು, ಈ ನಿಮಿತ್ತ ಪ್ರತಿ ಪೊಲೀಸ್‌ ಠಾಣೆಗೂ ಸಿಹಿ ತಿಂಡಿಯ ಪೊಟ್ಟಣಗಳನ್ನು ಹಂಚಲಾಗಿದೆ.

ಈ ಬಾಕ್ಸ್‌ನಲ್ಲಿ ಸಣ್ಣದೊಂದು ಆಹ್ವಾನ ಪತ್ರಿಕೆ ಇಡಲಾಗಿದೆ. ಅದರಲ್ಲಿ ಮುಕೇಶ್‌ ಅಂಬಾನಿ, ಅವರ ಪತ್ನಿ ನೀತಾ ಮತ್ತು ಅವರ ಮಕ್ಕಳ ಹೆಸರು ಇದ್ದು, ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಯನ್ನು ಕೋರುತ್ತಿದ್ದೇವೆ ಎಂದು ಬರೆಯಲಾಗಿದೆ.