ಜಿಯೋ ಐಡಿಯಾ ಪುತ್ರಿ ಇಶಾದ್ದು: ಮುಕೇಶ್‌ ಅಂಬಾನಿ

First Published 17, Mar 2018, 9:18 AM IST
Mukesh Ambani says Jio was seeded by daughter Isha
Highlights

ಜಿಯೋ ಪ್ರಾರಂಭಿಸಿದ ಎರಡೇ ಎರಡು ವರ್ಷದಲ್ಲಿ ಭಾರತ ವಿಶ್ವದ ಅತಿದೊಡ್ಡ ಬ್ರ್ಯಾಡ್‌ಬ್ರಾಂಡ್‌ ಡಾಟಾ ಬಳಸುವ ದೇಶವಾಗಿದ್ದು, ಈ ಜಿಯೋ ಪರಿಕಲ್ಪನೆಯನ್ನು ಬಿತ್ತಿದ್ದೇ ತಮ್ಮ ಮಗಳು ಇಶಾ ಎಂದು ರಿಲಯನ್ಸ್‌ ಒಡೆತನದ ಮುಖ್ಯಸ್ಥ ಮುಖೇಶ್‌ ಅಂಬಾನಿ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ.

ಲಂಡನ್‌: ಜಿಯೋ ಪ್ರಾರಂಭಿಸಿದ ಎರಡೇ ಎರಡು ವರ್ಷದಲ್ಲಿ ಭಾರತ ವಿಶ್ವದ ಅತಿದೊಡ್ಡ ಬ್ರ್ಯಾಡ್‌ಬ್ರಾಂಡ್‌ ಡಾಟಾ ಬಳಸುವ ದೇಶವಾಗಿದ್ದು, ಈ ಜಿಯೋ ಪರಿಕಲ್ಪನೆಯನ್ನು ಬಿತ್ತಿದ್ದೇ ತಮ್ಮ ಮಗಳು ಇಶಾ ಎಂದು ರಿಲಯನ್ಸ್‌ ಒಡೆತನದ ಮುಖ್ಯಸ್ಥ ಮುಖೇಶ್‌ ಅಂಬಾನಿ ಮೊದಲ ಬಾರಿಗೆ ಹೇಳಿಕೊಂಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಅಂಬಾನಿ ಈ ವಿಷಯ ಬಹಿರಂಗಪಡಿಸಿದ್ದಾರೆ. 2011ರಲ್ಲಿ ಇಶಾ, ಯೇಲ್‌ ವಿವಿಯಿಂದ ರಜಾದಿನಗಳಲ್ಲಿ ಬಂದಿದ್ದ ಸಮಯದಲ್ಲಿ ‘ಅಪ್ಪ ಮನೆಯಲ್ಲಿ ಇಂಟರ್‌ನೆಟ್‌ ಹೇಗಿದೆ?’ ಎಂದಿದ್ದಳು. ಅದಕ್ಕೆ ಆಕೆಯ ಅವಳಿ ಸಹೋದರ ಆಕಾಶ್‌ ‘ಹಳೆ ಕಾಲದಲ್ಲಿ ಟೆಲಿಕಾಂ ಎಂಬುದು ಧ್ವನಿಮಾತ್ರ ಆಗಿತ್ತು, ಜನ ಕರೆ ಮಾಡುತ್ತಿದ್ದರು.

ಆದರೆ ಈಗ ಇಡೀ ಜಗತ್ತೇ ಡಿಜಿಟಲ್‌ ಆಗಿದೆ’ ಎಂದು ಪ್ರತಿಕ್ರಿಯಿಸಿದ್ದ. ಇಶಾ ಮತ್ತು ಆಕಾಶ್‌ ಭಾರತದ ಯುವ ಪೀಳಿಗೆಗೆ ಸೇರಿದ್ದಾರೆ. ಅವರು ಹೆಚ್ಚು ಸೃಜನಾತ್ಮಕತೆ, ಮಹತ್ವಾಕಾಂಕ್ಷೆ, ತಾಳ್ಮೆ ಹೊಂದಿದ್ದು, ಬ್ರಾಡ್‌ಬ್ರಾಂಡ್‌ ಅಂತರ್ಜಾಲ ಯುವ ವಯಸ್ಸಿನ ಸ್ಪಷ್ಟತಂತ್ರಜ್ಞಾನವಾಗಿದೆ ಮತ್ತು ಭಾರತ ಬಿಟ್ಟು ಹೋಗಬಾರದು ಎಂದು ಈ ಯುವ ಭಾರತೀಯರು ನನಗೆ ಮನವರಿಕೆ ಮಾಡಿದರು ಎಂದು ಅವರು ಹೇಳಿದರು.

 

loader