ಮಾಜಿ ಸಿಎಂ ಕುಮಾರಸ್ವಾಮಿ 2018ರ ಚುನಾವಣೆಗೆ  ಹೊಸ ಹೊಸ ಕಾರ್ಯತಂತ್ರಗಳನ್ನು ಮಾಡುತ್ತಿದ್ದಾರೆ. ಆ ತಂತ್ರಗಳ ಪಟ್ಟಿಗೆ ಈಗ ಮುದ್ದೆ-ರೊಟ್ಟಿ ಜೊತೆ ಚರ್ಚೆ ಎಂಬ ಹೊಸ ಪರಿಕಲ್ಪನೆ ಸೇರಿಕೊಂಡಿದೆ.

ಬೆಂಗಳೂರು(ಮೇ.24): ಮಾಜಿ ಸಿಎಂ ಕುಮಾರಸ್ವಾಮಿ 2018ರ ಚುನಾವಣೆಗೆ ಹೊಸ ಹೊಸ ಕಾರ್ಯತಂತ್ರಗಳನ್ನು ಮಾಡುತ್ತಿದ್ದಾರೆ. ಆ ತಂತ್ರಗಳ ಪಟ್ಟಿಗೆ ಈಗ ಮುದ್ದೆ-ರೊಟ್ಟಿ ಜೊತೆ ಚರ್ಚೆ ಎಂಬ ಹೊಸ ಪರಿಕಲ್ಪನೆ ಸೇರಿಕೊಂಡಿದೆ.

2014 ರ ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ಮಾಡಿದ್ದ ಚಹಾ ಪೇ ಚರ್ಚಾ ಪರಿಕಲ್ಪನೆಯ ರೀತಿಯೇ ಎಚ್​ಡಿಕೆ ಕೂಡಾ, ಮುದ್ದೆ, ರೊಟ್ಟಿ ಪೆ ಚರ್ಚಾ ಎನ್ನುತ್ತಿದ್ದಾರೆ. ಮುದ್ದೆ ತಿನ್ನುತ್ತಾ, ರೊಟ್ಟಿ ಮುರಿಯುತ್ತಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ, ಪ್ರಾದೇಶಿಕ ಪಕ್ಷ ಬೆಳೆಸೋಣ ಎಂಬ ಪೋಸ್ಟರ್'​ಗಳು ಜೆಡಿಎಸ್​ನ ಫೇಸ್ಬುಕ್ ಪೇಜ್ ತುಂಬಾ ಹರಿದಾಡುತ್ತಿವೆ.