ಪಪ್ಪಾ 'ನಾನು ನಿಮ್ಮ ಮಗಳಾಗಿ ಇರಲು ಯೋಗ್ಯಳಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ,
ಬಾಗಲ ಕೋಟೆ(ಅ.20): ಕಾಲೇಜು ವಿದ್ಯಾರ್ಥಿನಿಯೋಬ್ಬಳು ಡೆತ್ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ನಗರದ ವಿದ್ಯಾಗಿರಿಯಲ್ಲಿರೋ ಮಲಪ್ರಭಾ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದ್ದು, ಎಂಟೆಕ್ ಪದವಿಯಲ್ಲಿ 2ನೇ ವರ್ಷದಲ್ಲಿ ಓದುತ್ತಿದ್ದ ರಿಜಿನಾ ಪ್ರಾಥಿಮಾ ಆತ್ಮಹತ್ಯೆ ಮಾಡಿಕೊಂಡಿರೋ ದುರ್ದೈವಿ. ಇಂದು ಮದ್ಯಾಹ್ನದ ವೇಳೆಯಲ್ಲಿ ತನ್ನ ತಂದೆ-ತಾಯಿಗೆ ಪೋನ ಮಾಡಿ ಚೆನ್ನಾಗಿಯೇ ಮಾತನಾಡಿದ್ದ ರಿಜಿನಾ ನಂತ್ರ ತನ್ನ ರೂಮ್ನಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಬಾಗಿಲು ಹಾಕಿಕೊಂಡು ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ನವನಗರ ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದು, ತನಿಖೆ ವೇಳೆ ರಿಜಿನಾ ಪ್ರಾಥಿಮಾ ಬರೆದಿಟ್ಟ ಡೆತ್ನೋಟ್ವೊಂದು ದೊರೆತಿದ್ದು, ಅದರಲ್ಲಿ ತಂದೆ-ತಾಯಿಗಳಿಗೆ ನಮಸ್ಕಾರ ತಿಳಿಸಿ, 'ನಾನುನಿಮ್ಮಮಗಳಾಗಿಇರಲುಯೋಗ್ಯಳಲ್ಲ, ದಯವಿಟ್ಟುನನ್ನನ್ನುಕ್ಷಮಿಸಿ, ನನಗೆಬದುಕಲುತುಂಬಾಕಷ್ಟವಾಗುತ್ತಿದೆ, ಜೀವನವನ್ನುಎದುರಿಸಲುಧೈರ್ಯವಿಲ್ಲ, ಆದ್ದರಿಂದಈನಿರ್ಧಾರಕೈಗೊಳ್ಳುತ್ತಿದ್ದೇನೆ, ದಯವಿಟ್ಟುಕ್ಷಮಿಸಿ' ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇತ್ತ ಸ್ಥಳಕ್ಕೆ ಆಕೆಯ ಪಾಲಕರು ಆಗಮಿಸುತ್ತಲೇ ಮಗಳ ಸ್ಥಿತಿಯನ್ನ ಕಂಡು ಗೋಳಿಡುತ್ತಿದ್ದ ದೃಶ್ಯ ಎಂತವರನ್ನು ಮನಕಲುಕುವಂತೆ ಮಾಡಿತ್ತು.
ವರದಿ: ಮಲ್ಲಿಕಾರ್ಜುನ ಹೊಸಮನಿ, ಬಾಗಲಕೋಟೆ, ಸುವರ್ಣನ್ಯೂಸ್
