Asianet Suvarna News Asianet Suvarna News

ಪಂದ್ಯ ಗೆಲ್ಲಿಸಿಕೊಟ್ಟ ಧೋನಿ: ಸನ್ ರೈಸರ್ಸ್ ವಿರುದ್ಧ ಪುಣೆಗೆ ಗೆಲುವು

ಸ್ಪಿತ್ ಔಟಾದ ನಂತರ  ಆಟ ಮುಂದುವರಿಸಿದ ಮಹೇಂದ್ರ ಸಿಂಗ್ ಧೋನಿ ಬಿರುಸಿನ ಆಟವಾಡಿ(61, 34 ಎಸೆತ, 5 ಬೌಂಡರಿ, 3 ಸಿಕ್ಸ್'ರ್) ಕೊನೆಯವರೆಗೂ ಆಟವಾಡಿ ಟೀಂ ಗೆಲುವಿಗೆ ಕಾರಣಕರ್ತರಾದರು.

MS Dhoni seals Rising Pune Supergiants last ball win

ಪುಣೆ(ಏ.22): ಭಾರತ ತಂಡದ ಮಾಜಿ ನಾಯಕ ಹಾಗೂ ಸ್ಟಾರ್ ಆಟಗಾರ ಮಹೇಂದ್ರ ಸಿಂಗ್ ಧೋನಿ ಕೊನೆಯ ಎಸತದಲ್ಲಿ ಎರಡು ರನ್ ಬೇಕಿದ್ದಾಗ ಬೌಂಡರಿ ಹೊಡೆಯುವ ಮೂಲಕ ವಿನ್ನಿಂಗ್ ಬ್ಯಾಟ್ಸ್'ಮೆನ್ ಆಗಿ ಮಿಂಚಿದರು. ಈ ಮೂಲಕ ರೈಸಿಂಗ್ ಪುಣೆ ಸೂಪರ್'ಜೈಂಟ್  ಹೈದರಾಬಾದ್ ವಿರುದ್ಧ 6 ವಿಕೇಟ್ ಜಯಗಳಿಸಿತು.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ'ನಲ್ಲಿ ಐಪಿಎಲ್ ಆವೃತ್ತಿಯ 24 ಪಂದ್ಯದಲ್ಲಿ  ಪುಣೆ ಹಾಗೂ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಸ್ಟೀವನ್ ಸ್ಮಿತ್ ಫೀಲ್ಡಿಂಗ್ ಆಯ್ದು ಕೊಂಡರು. ಬ್ಯಾಟಿಂಗ್ ಆರಂಭಿಸಿದ ಡೇವಿಡ್ ವಾರ್ನರ್ ನೇತೃತ್ವದ ಸನ್ ರೈಸರ್ಸ್ ತಂಡಕ್ಕೆ ಸ್ವತಃ ನಾಯಕ ವಾರ್ನರ್(43,40 ಎಸೆತ, 1 ಸಿಕ್ಸ್'ರ್ ಹಾಗೂ 3 ಬೌಂಡರಿ) ಬಿರುಸಿನ ಆಟಗಾರರಾದ ಶಿಖರ್ ಧವನ್ (30, 29 ಎಸೆತ, 5 ಬೌಂಡರಿ) ಹೇನ್ರಿಕ್ಯೂಸ್(55, 28 ಎಸೆತ, 2 ಸಿಕ್ಸ್'ರ್ ಹಾಗೂ 6 ಬೌಂಡರಿ) ಹಾಗೂ ಕೇನ್ ವಿಲಿಯಮ್ಸ್' 21 (14 ಎಸೆತ,1 ಸಿಕ್ಸ್'ರ್ ಹಾಗೂ 1 ಬೌಂಡರಿ) ರನ್ ಗಳಿಸುವ ಮೂಲಕ ತಂಡದ ಮೊತ್ತ  176/3 ಗಳಿಸಲು ನೆರವಾದರು.

ಈ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪುಣೆ ತಂಡ ಆರಂಭದಲ್ಲಿಯೇ ಬಿರುಸಿನ ಬ್ಯಾಟ್ಸ್'ಮೆನ್ ರಹಾನೆ ಅವರ ವಿಕೇಟ್ ಕಳೆದುಕೊಂಡಿತು. ತ್ರಿಪಾಟಿ(59,41 ಎಸೆತ, 3 ಸಿಕ್ಸ್'ರ್, 6 ಬೌಂಡರಿ ) ಹಾಗೂ ನಾಯಕ ಸ್ಟೀವನ್ ಸ್ಮಿತ್ (27, 21 ಎಸೆತ 2 ಸಿಕ್ಸ್'ರ್ ಹಾಗೂ 1 ಬೌಂಡರಿ) 10.5 ಓವರ್'ಗಳಲ್ಲಿ 2ನೇ ವಿಕೇಟ್'ಗೆ  87 ರನ್ ಪೇರಿಸಿದರು.ಸ್ಪಿತ್ ಔಟಾದ ನಂತರ  ಆಟ ಮುಂದುವರಿಸಿದ ಮಹೇಂದ್ರ ಸಿಂಗ್ ಧೋನಿ ಬಿರುಸಿನ ಆಟವಾಡಿ(61, 34 ಎಸೆತ, 5 ಬೌಂಡರಿ, 3 ಸಿಕ್ಸ್'ರ್) ಕೊನೆಯವರೆಗೂ ಆಟವಾಡಿ ಟೀಂ ಗೆಲುವಿಗೆ ಕಾರಣಕರ್ತರಾದರು.

 

ಸ್ಕೋರ್

ಸನ್ ರೈಸರ್ಸ್ ಹೈದರಾಬಾದ್ : 176/3 (20/20 )

ಪುಣೆ ಸೂಪರ್ ಜೈಟ್ಸ್: 179/4 (20.0/20 )

ಪಂದ್ಯ ಶ್ರೇಷ್ಠ: ಮಹೇಂದ್ರ ಸಿಂಗ್ ಧೋನಿ         

Follow Us:
Download App:
  • android
  • ios