Asianet Suvarna News Asianet Suvarna News

ಮುಗಿಯಿತಾ ಧೋನಿ ಕ್ರಿಕೆಟ್ ಭವಿಷ್ಯ ? ಅದೃಷ್ಟದ ಆಟಗಾರ ಮತ್ತೊಮ್ಮೆ ಔಟ್ ?

ಅದೃಷ್ಟದ ನಾಯಕ ಇನ್ನು ಮುಂದೆ ಪುಣೆ ತಂಡದಲ್ಲಿ ಕೇವಲ ಆಟಗಾರನಾಗಿ ಮಾತ್ರ ಇರುತ್ತಾರೆ. ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಧೋನಿಯೇ ಚಕ್ರವರ್ತಿಯಾಗಿದ್ದರು. ಟೆಸ್ಟ್, ಏಕದಿನ, ಟಿ20 ಜೊತೆಗೆ ಐಪಿಎಲ್'ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್'ಗೆ ಅವರೆ ನಾಯಕರಾಗಿದ್ದರು.

MS Dhoni axed as Rising Pune Supergiants skipper for IPL 2017

ಮುಂಬೈ(ಫೆ.19): ಭಾರತ ಕ್ರಿಕೆಟ್ ತಂಡದ ಅದೃಷ್ಟದ ಆಟಗಾರ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಭವಿಷ್ಯ ಮುಗಿಯುತ್ತಿರುವ ಸೂಚನೆ ಕಾಣುತ್ತಿದೆ.

ಈಗಾಗಲೇ ಟೆಸ್ಟ್ ಹಾಗೂ ಏಕದಿನ, ಟಿ20 ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಖ್ಯಾತ ಆಟಗಾರನನ್ನು ಐಪಿಎಲ್'ನ 2017ರ 10ನೇ ಆವೃತ್ತಿಯ ರೈಸಿಂಗ್ ಪುಣೆ ಸೂಪರ್'ಜೈಂಟ್ಸ್ ನಾಯಕತ್ವ ಸ್ಥಾನದಿಂದ ಕೈಬಿಡಲಾಗಿದೆ. ಈ ಆವೃತ್ತಿಗೆ ಧೋನಿ ಬದಲಿಗೆ ಆಸ್ಟ್ರೇಲಿಯಾ ತಂಡದ ನಾಯಕ ಸ್ಟಿವ್ ಸ್ಮಿತ್ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ.

ಅದೃಷ್ಟದ ನಾಯನ ಇನ್ನು ಮುಂದೆ ಪುಣೆ ತಂಡದಲ್ಲಿ ಕೇವಲ ಆಟಗಾರನಾಗಿ ಮಾತ್ರ ಇರುತ್ತಾರೆ. ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಧೋನಿಯೇ ಚಕ್ರವರ್ತಿಯಾಗಿದ್ದರು. ಟೆಸ್ಟ್, ಏಕದಿನ, ಟಿ20 ಜೊತೆಗೆ ಐಪಿಎಲ್'ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್'ಗೆ ಅವರೆ ನಾಯಕರಾಗಿದ್ದರು. ಕ್ರಿಕೆಟ್'ನಲ್ಲಿ ಅವರು ಹೇಳಿದ ಮಾತು ವೇದವಾಕ್ಯವಾಗಿತ್ತು. ಬಿಸಿಸಿಐ ಅಧ್ಯಕ್ಷರೇ ಅವರ ಮಾತನ್ನು ತೆಗೆದು ಹಾಕುತ್ತಿರಲಿಲ್ಲ.

ತಂಡಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದನ್ನು ಬಿಸಿಸಿಐಗಿಂತ ಅವರೇ ನಿರ್ಧರಿಸುತ್ತಿದ್ದರು. ಅವರಿಕೆ ನಿಷ್ಠರಾಗಿದವರೆಲ್ಲ ತಂಡದಲ್ಲಿ ಸ್ಥಾನ ಗಿಟ್ಟಿಸುತ್ತಿದ್ದರು. 2011ರ  ಏಕದಿನ,2007ರ ಟಿ20 ವಿಶ್ವಕಪ್'ಅನ್ನು ಗೆಲ್ಲಿಸಿಕೊಟ್ಟ ನಾಯಕ.2010 ಹಾಗೂ 2011ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇವರ ಕ್ಯಾಪ್ಟನ್ ಆಗಿದ್ದಾಗ ಟೆಸ್ಟ್ ತಂಡ ಕೂಡ ನಂಬರ್ ಒನ್ ಸ್ಥಾನಕ್ಕೇರಿತ್ತು.

ಆದರೆ 2015ರಲ್ಲಿ ಸೆಮಿಫೈನಲ್'ನಲ್ಲಿ ಭಾರತ ಸೋತಾಗ ಎಂ.ಎಸ್.ಧೋನಿ ಅದೃಷ್ಟ ಒಂದೊಂದಾಗಿ ಕೈಕೊಡುತ್ತಾ ಬಂತು. ಮೊದಲು ಟೆಸ್ಟ್ ತಂಡಕ್ಕೆ ರಾಜೀನಾಮೆ, ಅನಂತರ ಏಕದಿನ,ಟಿ20 ನಾಯಕತ್ವಕ್ಕೂ ರಾಜೀನಾಮೆ ನೀಡಿದರು. ಈಗ ಐಪಿಎಲ್ ಕ್ಯಾಪ್ಟನ್ಸಿಯಿಂದಲೂ ಕೈಬಿಡಲಾಗಿದೆ. ಅದೃಷ್ಟದ ಆಟಗಾರ ಸಾರಥ್ಯದ ನೆನಪು ಇನ್ನು ನೆನಪು ಮಾತ್ರವಾಗಿಬಹುದೇನೊ.    

ಪುಣೆ ತಂಡಕ್ಕೆ ನಾಯಕನಾಗಿ ನೇಮಕವಾಗಿರುವ ಸ್ಟಿವ್ ಸ್ಮಿತ್ ಆಸ್ಟ್ರೇಲಿಯಾದ ಮುಂದಿನ ರಿಕಿಪಾಂಟಿಂಗ್ ಎಂದೇ ಬಿಂಬಿತವಾಗಿದ್ದಾರೆ. ಈಗಾಗಲೇ ಆಸ್ಟ್ರೇಲಿಯಾ ತಂಡದ ಟೆಸ್ಟ್, ಏಕದಿನ ಹಾಗೂ ಟಿ20 ತಂಡಕ್ಕೆ ನಾಯಕರಾಗಿದ್ದು, ಐಪಿಎಲ್ ತಂಡಕ್ಕೆ ಈಗ ಕ್ಯಾಪ್ಟನ್ ಆಗಿದ್ದಾರೆ.

Follow Us:
Download App:
  • android
  • ios