ಬಿಜೆಪಿ ಕಾರ್ಯಕರ್ತರನ್ನ ಮುಟ್ಟಿದ್ರೆ ಸುಮ್ಮನಿರೋ ಮಾತೆ ಇಲ್ಲ, ಹುಷಾರ್ : ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ

First Published 2, Jun 2018, 10:12 PM IST
MP Pratap Simha Warns CM HD Kumaraswamy
Highlights

ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ಕಾರ್ಯಕರ್ತರನ್ನ ಮುಟ್ಟಿದ್ರೆ ಹುಷಾರ್ ಎಂದು ಹಿಂದೊಮ್ಮೆ ಎಚ್ಚರಿಸಿದ್ದರು.. ಈಗ ಮತ್ತೊಮ್ಮೆ ಅದೇ ಎಚ್ಚರಿಕೆ ನೀಡಿದ್ದಾರೆಕುಮಾರಸ್ವಾಮಿ ಸರ್ಕಾರ ಬಿಜೆಪಿ ಕಾರ್ಯಕರ್ತರನ್ನ ಮುಟ್ಟಿದ್ರೆ, ಸುಮ್ಮನಿರೋ ಮಾತೆ ಇಲ್ಲ. ಹುಷಾರ್ ಎಂದು ಸಂಸದ ಪ್ರತಾಪ್ ಸಿಂಹ ಕುಮಾರ್ಸವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ

 

ಚಾಮರಾಜನಗರ:

ಚಾಮರಾಜನಗರ:

ಚಾಮರಾಜನಗರ: ಬಿಜೆಪಿ ಸಂಸದ ಪ್ರತಾಪ್ ಸಿಂಹ ತಮ್ಮ ಕಾರ್ಯಕರ್ತರನ್ನ ಮುಟ್ಟಿದ್ರೆ ಹುಷಾರ್ ಎಂದು ಹಿಂದೊಮ್ಮೆ ಎಚ್ಚರಿಸಿದ್ದರುಈಗ ಮತ್ತೊಮ್ಮೆ ಅದೇ ಎಚ್ಚರಿಕೆ ನೀಡಿದ್ದಾರೆಕುಮಾರಸ್ವಾಮಿ ಸರ್ಕಾರ ಬಿಜೆಪಿ ಕಾರ್ಯಕರ್ತರನ್ನ ಮುಟ್ಟಿದ್ರೆ, ಸುಮ್ಮನಿರೋ ಮಾತೆ ಇಲ್ಲ. ಹುಷಾರ್ ಎಂದು ಸಂಸದ ಪ್ರತಾಪ್ ಸಿಂಹ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಚಾಮರಾಜಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ  ಪ್ರತಾಪ್ ಸಿಂಹಬಿಜೆಪಿಯ ನಮ್ಮ ಕಾರ್ಯಕರ್ತರನ್ನು ಯಾರಾದ್ರೂ ಟಚ್ ಮಾಡಿದರೆ ಈಗಲೂ ನಾವು ಸುಮ್ಮನೆ ಕೂರಲ್ಲ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಪುನರುಚ್ಚಾರಿಸಿದ್ದಾರೆ.

ಕುಮಾರಸ್ವಾಮಿ ಸರ್ಕಾರದಲ್ಲೂ ನಮ್ಮ ಕಾರ್ಯಕರ್ತರಿಗೆ ತೊಂದರೆ ನೀಡಿದರೆ ಸುಮ್ಮನಿರಲ್ಲ. ಹಾಸನದಲ್ಲಿ ಸ್ಪರ್ಧೆ ಮಾಡುವುದು ಕೇವಲ ಊಹಾಪೋಹಮೈಸೂರು ಬಿಟ್ಟು ಬೇರೆಲ್ಲೂ ಸ್ಪರ್ಧಿಸಲ್ಲ. ಮೈಸೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಮೈಸೂರಿನ ಅಭಿವೃದ್ಧಿಗೆ ಕೇಂದ್ರದಿಂದ ಹನ್ನೊಂದುವರೆ ಸಾವಿರ ಕೋಟಿ ತಂದಿದ್ದೇನೆ ಎಂದು ಇದೇ ವೇಳೆ ಹೇಳಿದರು.

loader