ವಜ್ರ ಮಹೋತ್ಸವದಲ್ಲಿ ಟಿಪ್ಪು ಸುಲ್ತಾನನನ್ನು ಶ್ಲಾಘಿಸಿದ ರಾಷ್ಟ್ರಪತಿಯವರಿಗೆ ಸಂಸದ ಪ್ರತಾಪ್ ಸಿಂಹ ಟ್ವಿಟರ್'ನಲ್ಲಿ ಪ್ರಶ್ನೆ ಕೇಳಿದ್ದಾರೆ.
ಬೆಂಗಳೂರು (ಅ.25): ವಜ್ರ ಮಹೋತ್ಸವದಲ್ಲಿ ಟಿಪ್ಪು ಸುಲ್ತಾನನನ್ನು ಶ್ಲಾಘಿಸಿದ ರಾಷ್ಟ್ರಪತಿಯವರಿಗೆ ಸಂಸದ ಪ್ರತಾಪ್ ಸಿಂಹ ಟ್ವಿಟರ್'ನಲ್ಲಿ ಪ್ರಶ್ನೆ ಕೇಳಿದ್ದಾರೆ.
ಗೌರವಾನ್ವಿತ ರಾಷ್ಟ್ರಪತಿಗಳೇ, ಟಿಪ್ಪು ಕ್ಷಿಪಣಿ ತಂತ್ರಜ್ಞಾನದ ಪ್ರರ್ವತಕರಾಗಿದ್ದರೆ 3 ಮತ್ತು 4 ನೇ ಆಂಗ್ಲೋ-ಇಂಡಿಯನ್ ಯುದ್ದ ಯಾಕೆ ಸೋತರು? ಕ್ಷಿಪಣಿಗಳನ್ನೇಕೆ ಆ ಸಮಯದಲ್ಲಿ ಬಳಸಲಿಲ್ಲ? ಎಂದು ಟ್ವಿಟರ್‌ನಲ್ಲಿ ರಾಷ್ಟ್ರಪತಿಗಳಿಗೆ ಪ್ರಶ್ನೆ ಹಾಕಿದ್ದಾರೆ.
ರಾಷ್ಟ್ರಪತಿಯವರು ಟಿಪ್ಪು ಹಿರೋ ಆಗಿ ವೀರ ಮರಣ ಹೊಂದಿದ ಎಂದಿದ್ದಾರೆ. ಸರ್, ಹೀರೋಗಳು ಯುದ್ದಭೂಮಿಯಲ್ಲಿ ಹೋರಾಟ ಮಾಡಿ ಸಾಯುತ್ತಾರೆ. ಆದರೆ ಟಿಪ್ಪು ತನ್ನ ಕೋಟೆಯೊಳಗೆ ಯುದ್ದವನ್ನೇ ಮಾಡದೆ ಮರಣಹೊಂದಿದ್ದಾನೆ ಎಂದು ಸಂಸದ ಪ್ರತಾಪ್ ಸಿಂಹ ಟ್ವಿಟರ್'ನಲ್ಲಿ ರಾಷ್ಟ್ರಪತಿಯವರಿಗೆ ಮಾಹಿತಿ ನೀಡಿದ್ದಾರೆ.
