ಮಾಯಾವತಿ ಕೋರ್ಟ್’ಗೆ ಮೊರೆ ಹೋಗುವುದನ್ನು ಲೆಕ್ಕಿಸುವುದಿಲ್ಲ, ಆದರೆ ಕೋರ್ಟ್’ಗೆ ಹೋಗುವ ಮುಂಚೆ ಅವರೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಅವರಿಗೆ ನಿದ್ರೆ ಹಾಗೂ ವಿರಾಮದ ಅಗತ್ಯವಿದೆ, ಎಂದು ಮೌರ್ಯ  ಹೇಳಿದ್ದಾರೆ.

ನವದೆಹಲಿ (ಮಾ.16): ವಿದ್ಯುನ್ಮಾನ ಮತಯಂತ್ರ (ಇವಿಎಂ) ವಂಚನೆ ವಿಚಾರವು ದಿನದಿಂದ ದಿನಕ್ಕೆ ರಾಜಕೀಯ ಕಾವು ಪಡೆದುಕೊಳುತ್ತಿದೆ. ಈ ಬಗ್ಗೆ ಬಿಎಸ್ಪಿ ವರಿಷ್ಠೆ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಮುಖಂಡ ಕೇಶವ ಪ್ರಸಾದ್ ಮೌರ್ಯ, ಕೆಲದಿನಗಳ ಮಟ್ಟಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದ್ದಾರೆ.

ಮಾಯಾವತಿ ಕೋರ್ಟ್’ಗೆ ಮೊರೆ ಹೋಗುವುದನ್ನು ಲೆಕ್ಕಿಸುವುದಿಲ್ಲ, ಆದರೆ ಕೋರ್ಟ್’ಗೆ ಹೋಗುವ ಮುಂಚೆ ಅವರೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯಬೇಕು. ಅವರಿಗೆ ನಿದ್ರೆ ಹಾಗೂ ವಿರಾಮದ ಅಗತ್ಯವಿದೆ, ಎಂದು ಮೌರ್ಯ ಏಎನ್’ಐ’ಗೆ ಹೇಳಿದ್ದಾರೆ.

ಮಾಯಾವತಿ ಆರೋಪಗಳಲ್ಲಿ ತೊಡಗದೇ, ಪ್ರಾಮಾಣಿಕವಾಗಿ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕೆಂದು ಮೌರ್ಯ ಹೇಳಿದ್ದಾರೆ.

2007ರಲ್ಲಿ ಜನಾದೇಶ ಅವರ ಪರವಾಗಿ ಬಂದಾಗ ಅದನ್ನು ಅವರು ಆಕ್ಷೇಪಿಸಿರಲಿಲ್ಲ, ಆದರೆ ಈಗ ಮತಯಂತ್ರದಲ್ಲಿ ಅವರಿಗೆ ದೋಷ ಕಂಡುಬರುತ್ತಿದೆಯೆಂದು, ಮೌರ್ಯ ಚಾಟಿ ಬೀಸಿದ್ದಾರೆ.