ಶಿಯಾನ್(ಸೆ.15): ಚೀನಾದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ವಾಯವ್ಯ ಪ್ರಾಂತ್ಯದ ಶಾಂಶಿಯ ಪ್ರವಾಸಿ ತಾಣ ಮೌಂಟ್ ಹುವಾಶನ್’ಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ.

ಈ ಪ್ರಾಂತ್ಯದಲ್ಲಿ ಸುಮಾರು 60 ಮಿ.ಮೀಯಷ್ಟು ಭಾರೀ ಮಳೆಯಾಗಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಮೌಂಟ್ ಹುವಾಶನ್’ಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಸ್ಥಳೀಯ ಆಡಳಿತ ಸ್ಪಷ್ಟಪಡಿಸಿದೆ.

ಅಲ್ಲದೇ ಪರ್ವತಾರೋಹಣ ಕೂಡ ನಿರ್ಬಂಧಿಸಲಾಗಿದ್ದು, ಸ್ಥಳೀಯ ಹವಾಮಾನ ಇಲಾಖೆ ಅನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮೌಂಟ್ ಹುವಾಶನ್ ನಿರ್ವಹಣಾ ಸಮಿತಿ ತಿಳಿಸಿದೆ.

ಭಾರೀ ಮಳೆಯ ಪರಿಣಾಮ ಭೂಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರವಸಿಗರ ನಿರ್ಬಂಧ ವಿಧಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.