ಹೆತ್ತ ತಂದೆ ಕೆಟ್ಟವನಾಗಿರಬಹುದು ಆದರೆದ್ರೆ ಕೆಟ್ಟ ತಾಯಿ ಇರುವುದಕ್ಕೆ ಸಾಧ್ಯನೇ ಇಲ್ಲ ಎಂದು ಹಿರಿಯರು ಹೇಳಿದ ಮಾತಿಗೆ ತದ್ವಿರುದ್ದ ಈ ಪ್ರಕರಣ. ಈ ಘಟನೆಯಿಂದ ಮಾನವ ಸಂಬಂಧಗಳು ನಶಿಸಿ ಹೋಗುತ್ತಿದೆಯಾ ಎನ್ನುವ ಅನುಮಾನ ಬರುವುದು ಸಹಜ. ಹೌದು ಹೆತ್ತ ತಾಯಿಯೇ ಕೊಲೆಗಾತಿಯಾದ ಕಥೆ ಇದು .

ಬೆಂಗಳೂರು(ಆ.28): ಇಲ್ಲೊಬ್ಬ ಶಿಕ್ಷಕಿ ಸಾವಿರಾರು ಮಕ್ಕಳಿಗೆ ಗುರು ಎನಿಸಿಕೊಂಡ ಈ ಮಹಾನ್ ತಾಯಿ ತನ್ನ ಮಗಳ ಪಾಲಿಗೆ ಯಮನಾಗಿಬಿಟ್ಟಳು. ಮೂರನೇ ಮಹಡಿಯಿಂದ 9 ವರ್ಷದ ಮಗಳನ್ನ ತಳ್ಳಿ ಕೊಂದೇಬಿಟ್ಟಿದ್ದಾಳೆ. ಅಂದಹಾಗೇ ಈ ಕೊಲೆಗಾತಿ ಹೆಸರು ಸಾಕ್ಷಿ. ಬೆಂಗಳೂರಿನ ನಂಜಪ್ಪ ಲೇಔಟ್ ನಲ್ಲಿರುವ ಚಿದಾನಂದ ಎಜುಕೇಷನ್ ಸೊಸೈಟಿಯಲ್ಲಿ ಹಿಂದಿ ಟೀಚರ್ ಆಗಿ ವರ್ಕ್ ಮಾಡುತ್ತಿದ್ದ ಬಂಗಾಳ ಮೂಲದ ಸಾಕ್ಷಿ ನಿನ್ನೆ ಇಂಥ ನೀಚ ಕೆಲಸ ಮಾಡಿದ್ದಾಳೆ.

ಕೆಲ ದಿನಗಳ ಹಿಂದೆ ಗಂಡ ಕಾಂಚನ್ ಸರ್ಕಾರ್ ಬೇರೆ ವಾಸವಿದ್ದ. ಆದರೂ ಇವಳ ಮನೆ ಬಾಡಿಗೆ, ಖರ್ಚನ್ನೆಲ್ಲಾ ಗಂಡನೇ ನೋಡಿಕೊಳ್ತಿದ್ನಂತೆ ಗಂಡ ತನ್ನಿಂದ ದೂರವಾದ ಸಿಟ್ಟಿಗೋ ಏನೋ. ಈ ತಾಯಿ ನಿನ್ನೆ ಮಾತು ಬಾರದ ತನ್ನ ಮಗಳನೇ ಕೊಂದುಹಾಕಿದ್ದಾಳೆ. ದುರಂತ ಏನು ಗೊತ್ತಾ. ಒಮ್ಮೆ ಬಾಲಕಯನ್ನ ಮಹಡಿಯಿಂದ ತಳ್ಳಿದಾಗ ಸತ್ತಿಲ್ಲ. ಇದನ್ನ ಖಚಿತಪಡಿಸಿಕೊಂಡ ಕಿರಾತಕಿ ಮಗು ಎತ್ತಿಕೊಂಡು ಹೋಗಿ ಎರಡನೇ ಬಾರಿಗೆ ಮಹಡಿಯಿಂದ ತಳ್ಳಿದ್ದಾಳಂತೆ. ಬಳಿಕ ತನ್ನ ಕೊಠಡಿಗೆ ಹೋಗಿ ಬಟ್ಟೆ ಬದಲಾಯಿಸಿ ಮೇಕಪ್ ಮಾಡಿಕೊಳ್ತಿದ್ಲಂತೆ. ಈ ಮೂಲಕ ತಾನೊಬ್ಬ ಮಾನಸಿಕ ಅಸ್ವಸ್ಥೆ ಎನ್ನುವ ಸೀನ್ ಕ್ರಿಯೇಟ್ ಮಾಡಲು ಹೊರಟಿದ್ದಳುಎನ್ನುವುದು ಆರೋಪ.

ಈಕೆ ಮಾಡಿದ ಘನಾಂದಾರಿ ಕೆಲಸಕ್ಕೆ ರೊಚ್ಚಿಗೆದ್ದ ಸ್ಥಳೀಯರೇ ಕಿರಾತಕಿ ತಾಯಿಯನ್ನು ಕಟ್ಟಿಹಾಕಿ.. ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪುಟ್ಟೆನಹಳ್ಳಿ ಪೊಲೀಸರು ಈಕೆಯನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.