ಬೆಂಗಳೂರು :  ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ವೃದ್ಧ ತಾಯಿಯೂ ಸಾವನ್ನಪ್ಪಿದ ಮನಃ ಕಲುಕುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 

ಶೇಷಾದ್ರಿಪುರಂ ನಿವಾಸಿ 83 ವರ್ಷದ ವಳ್ಳಿಯಮ್ಮರ  ಪುತ್ರ   62 ವರ್ಷದ ರವಿಚಂದ್ರ ಹೃದಯಾಘಾತದಿಂದ ಆಸ್ಪತ್ರೆಗೆ ಸೇರಿದ್ದರು. ಆದರೆ ಚಿಕಿತ್ಸೆ ಫಲಿಸದೇ ರವಿಚಂದ್ರ ಸಾವನ್ನಪ್ಪಿದ್ದು, ಈ ಸುದ್ದಿ ಕೇಳಿ ತಾಯಿಯೂ ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

"

ಕ್ಯಾಟರಿಂಗ್ ಬ್ಯುಸಿನೆಸ್ ನಡೆಸುತಿದ್ದ ರವಿ ಚಂದ್ರ ಅವರು ಅನಾರೋಗ್ಯ ಹಿನ್ನೆಲೆ  ಆಸ್ಪತ್ರೆಗೆ ತೆರಳುತಿದ್ದ ವೇಳೆ ರಸ್ತೆ ಮಧ್ಯದಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿದ್ದರು. 

ಕೂಡಲೇ ಅವರು ತೆರಳುತ್ತಿದ್ದ ಕ್ಯಾಬ್ ಚಾಲಕನೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ರವಿಚಂದ್ರ ಬುಧವಾರ ಮೃತಪಟ್ಟಿದ್ದರು.  

ಪುತ್ರನ ನಿಧನದ ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದು ವೃದ್ಧೆಯೂ ಸಾವನ್ನಪ್ಪಿದ್ದಾರೆ.