ಮಗ ಹೆಬ್ಬುಲಿ ಸಿನೆಮಾ ಶೈಲಿಯಲ್ಲಿ ಹೇರ್’ಕಟ್ ಮಾಡಿಸಿದ್ದನ್ನು ಆಕ್ಷೇಪಿಸಿದ್ದಕ್ಕೆ ಪತಿ ತಿರುಗಿ ಬೈದಿದ್ದರಿಂದ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿನೋಬ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶಿವಮೊಗ್ಗ: ಮಗ ಹೆಬ್ಬುಲಿ ಸಿನೆಮಾ ಶೈಲಿಯಲ್ಲಿ ಹೇರ್’ಕಟ್ ಮಾಡಿಸಿದ್ದನ್ನು ಆಕ್ಷೇಪಿಸಿದ್ದಕ್ಕೆ ಪತಿ ತಿರುಗಿ ಬೈದಿದ್ದರಿಂದ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ವಿನೋಬ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರತಿಭಾ (35) ಮೃತ ಮಹಿಳೆ. ಶುಕ್ರವಾರ ಅವರ ಮಲಮಗ ಹೆಬ್ಬುಲಿ ಸಿನಿಮಾ ಶೈಲಿಯಲ್ಲಿ ಹೇರ್ ಕಟ್ ಮಾಡಿಕೊಂಡು ಬಂದಿದ್ದಾನೆ. ಇದನ್ನು ಕಂಡು ಪ್ರತಿಭಾ ಅವರು ಆಕ್ಷೇಪಿಸಿ ತಾವೇ ಕತ್ತರಿ ಹಿಡಿದು ಮತ್ತೆ ಹೇರ್ ಕಟ್ ಮಾಡಿದ್ದಾರೆ. ಸಂಜೆ ಮನೆಗೆ ಬಂದ ಪತಿಯು ಪತ್ನಿಯನ್ನೇ ಆಕ್ಷೇಪಿಸಿದ್ದಾರೆ. ಇದರ ಜತೆಗೆ ಹಲವು ವೈಯುಕ್ತಿಕ ಕಾರಣಗಳಿಂದಲೂ ನೊಂದಿದ್ದ ಪ್ರತಿಭಾ ಅವರು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯವರಿಗೆ ಶನಿವಾರ ಬೆಳಗ್ಗೆ ವಿಷಯ ಗಿತ್ತಾಗಿದೆ. ಈ ಸಂಬಂಧ ವಿನೊಬ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.