ಭೀಕರ ಸುನಾಮಿಯಿಂದ ಮತ್ತಷ್ಟುಅನಾಹುತದ ಸುದ್ದಿಗಳು ಬರತೊಡಗಿದ್ದು, ಸಾವಿನ ಸಂಖ್ಯೆ 832ನ್ನು ತಲುಪಿದೆ. ಜೊತೆಗೆ  ಇಂಡೋನೇಷಿಯಾದ ಸುನಾಮಿಗೆ ತುತ್ತಾದ ಪ್ರದೇಶದಲ್ಲಿ ಪರಿಹಾರ ಕಾರ್ಯ ಮುಂದುವರೆದಿದ್ದು, ಸಾವಿನ ಸಂಖ್ಯೆ ಹಲವು ಸಾವಿರ ದಾಟಬಹುದು ಎಂಬ ಆತಂಕ ವ್ಯಕ್ತವಾಗಿದೆ. 

ಪಲು: ಭೀಕರ ಸುನಾಮಿಗೆ ತುತ್ತಾಗಿರುವ ಇಂಡೋನೇಷ್ಯಾದಿಂದ ಮತ್ತಷ್ಟುಅನಾಹುತದ ಸುದ್ದಿಗಳು ಬರತೊಡಗಿದ್ದು, ಸಾವಿನ ಸಂಖ್ಯೆ 832ನ್ನು ತಲುಪಿದೆ. ಜೊತೆಗೆ ಸುನಾಮಿಗೆ ತುತ್ತಾದ ಪ್ರದೇಶದಲ್ಲಿ ಪರಿಹಾರ ಕಾರ್ಯ ಮುಂದುವರೆದಿದ್ದು, ಸಾವಿನ ಸಂಖ್ಯೆ ಹಲವು ಸಾವಿರ ದಾಟಬಹುದು ಎಂಬ ಆತಂಕ ವ್ಯಕ್ತವಾಗಿದೆ. ಈ ನಡುವೆ ಸುನಾಮಿ ಪೀಡಿತ ಪ್ರದೇಶಗಳಿಗೆ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೊಡೊ ಭಾನುವಾರ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ನಡೆಸಿದ್ದಾರೆ.

ಈ ನಡುವೆ ಸುನಾಮಿಗೆ ತುತ್ತಾಗಿರುವ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಸ್ವಚ್ಛ ಕುಡಿಯುವ ನೀರು ಮತ್ತು ಆಹಾರದ ತೀವ್ರ ಕೊರತೆ ಎದುರಾಗಿದೆ. ಹೀಗಾಗಿ ಜನತೆ ಭಾರೀ ಪ್ರಮಾಣದಲ್ಲಿ ಮಾರುಕಟ್ಟೆಗಳ ಮೇಲೆ ದಾಳಿ ಮಾಟಿ ಲೂಟಿ ನಡೆಸಿದ್ದಾರೆ. ಇದು ಪರಿಸ್ಥಿತಿಯನ್ನು ಮತ್ತಷ್ಟುಬಿಗಡಾಯಿಸಿದೆ.

ಇನ್ನೊಂದೆಡೆ ಗಾಯಾಳುಗಳು ಆಸ್ಪತ್ರೆಗಳಿಗೆ ಭಾರೀ ಪ್ರಮಾಣದಲ್ಲಿ ದಾಖಲಾಗುವುದು ಮುಂದುವರೆಯುತ್ತಲೇ ಇದ್ದು, ಅಲ್ಲಿಯೂ ಸಂತ್ರಸ್ತರ ನಿರ್ವಹಣೆ ವೈದ್ಯರ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ.

ಇದೇ ವೇಳೆ ಭಾನುವಾರ ಪಲು ನಗರದಲ್ಲಿನ ವಿಮಾನ ನಿಲ್ದಾಣಕ್ಕೆ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಿಮಾನವೊಂದು ಬಂದಿಳಿದಿದ್ದು, ಅದು ಇನ್ನೊಂದು ಎರಡು ದಿನಗಳಲ್ಲಿ ಸಂತ್ರಸ್ತರನ್ನು ತಲುಪಲಿದೆ ಎನ್ನಲಾಗಿದೆ. ಈ ನಡುವೆ ಮತ್ತೆ ಭೂಕಂಪ ಸಂಭವಿಸುವ ಭೀತಿಯಿಂದಾಗಿ ಜನ ತಮ್ಮ ಮನೆಗಳಿಂದ ಹೊರಗೆ, ಬಂಬುವಿನಿಂದ ಮಾಡಿದ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸ ಮಾಡುತ್ತಿದ್ದಾರೆ.

ಸುನಾಮಿಗೆ ತುತ್ತಾದ ಪ್ರದೇಶಗಗಳ ಉಪಗ್ರಹ ಚಿತ್ರವೊಂದು ಬಿಡುಗಡೆಯಾಗಿದ್ದು, ಅದರಲ್ಲಿ ತೀರ ಪ್ರದೇಶದಗಳಲ್ಲ ಸುನಾಮಿ ಹೊಡೆತಕ್ಕೆ ಹಡಗುಗಳು ನೆಲದ ಮೇಲೆ ಬಂದು ನಿಂತಿರುವುದು, ಭಾರೀ ಪ್ರಮಾಣದಲ್ಲಿ ಕಟ್ಟಡಗಳು ಉರುಳಿರುವುದು, ಸಾವಿರಾರು ಮರಗಿಡಗಳು ಉರುಳಿಬಿದ್ದಿರುವುದು ಕಂಡುಬಂದಿದೆ.

ಶುಕ್ರವಾರ ರಾತ್ರಿ ವೇಳೆ ಸಂಭವಿಸಿದ ಭೂಕಂಪ ರಿಕ್ಟರ್‌ ಮಾಪಕದಲ್ಲಿ 7.5ರ ತೀವ್ರತೆಯನ್ನು ಹೊಂದಿದ್ದು, ಸಾವಿರಾರು ಜನರನ್ನು ನಿರ್ವಸಿತರನ್ನಾಗಿ ಮಾಡಿರುವ ಜೊತೆಗೆ ಸಾವಿರಾರು ಜನರನ್ನು ಬಲಿಪಡೆದಿರುವ ಶಂಕೆಯೂ ಇದೆ.