ಹುಬ್ಬಳ್ಳಿ : ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಚರ್ಚೆಗಳು ನಡೆಯುತ್ತಿದ್ದು, ಸರ್ಕಾರ ಪತನವಾಗುವ ಬಗ್ಗೆ ಬಿಜೆಪಿ ನಾಯಕರು ಭವಿಷ್ಯ ನುಡಿಯುತ್ತಿದ್ದಾರೆ. 

ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಚಿವ ಮುರುಗೇಶ್ ನಿರಾಣಿ ನಿಶ್ಚಿತವಾಗಿ ಈ ತಿಂಗಳ ಅಂತ್ಯದೊಳಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದರು.

‘23ಕ್ಕೆ ರಾಜೀನಾಮೆ ನೀಡಲಿದ್ದಾರೆ ಕೈ ಶಾಸಕ’

ಸಮ್ಮಿಶ್ರ  ಸರ್ಕಾರದೊಳಗಿನ ಅಸಮಾಧಾನವೇ ನಮ್ಮ ಸರ್ಕಾರ ರಚನೆಗೆ ಕಾರಣವಾಗುತ್ತದೆ. ಲೋಕಸಭಾ ಚುನಾವಣೆವರೆಗೆ ಮಾತ್ರ ಸಿಎಮ್ ಆಗಿರುತ್ತೇನೆಂದು ಕುಮಾರಸ್ವಾಮಿಯೇ ಹೇಳಿದ್ದಾರೆ. ಇದರಿಂದ ಸರ್ಕಾರದ ಅವಧಿ ಮುಗಿದಿದೆ.

ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಯಾವ ರೀತಿ ತಮ್ಮ ಕಾರ್ಡ್ಸ್ ಬಿಡ್ತಾರೆ ಅನ್ನೋದು ದೇಶದ ಜನಕ್ಕೆ ಗೊತ್ತಾಗಿದೆ. ಶಾಸಕರು ಅಸಮಾಧಾನದಿಂದ ಬಿಜೆಪಿ ಬಾಗಿಲು ತಟ್ಟುತ್ತಿದ್ದಾರೆ.  ಇಪ್ಪತ್ತಕ್ಕೂ ಹೆಚ್ಚು ಶಾಸಕರು ಬಿಜೆಪಿ ಸೇರುತ್ತಾರೆ. 
ಕಾಂಗ್ರೆಸ್ ಮತ್ತು ಜೆಡಿಎಸ್ ಅತೃಪ್ತರು ನಮ್ಮ ಕಡೆ ಬರುತ್ತಿದ್ದಾರೆ ಎಂದು ನಿರಾಣಿ ಹೇಳಿದರು.